ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ (ಸಂಗ್ರಹ ಚಿತ್ರ) 
ವಾಣಿಜ್ಯ

ಚೀನಾ ಕುಸಿತ ಭಾರತದ ಮೇಲೂ ಪರಿಣಾಮ

ಚೀನಾಗೆ ತಟ್ಟಿರುವ ಆರ್ಥಿಕ ಹಿಂಜರಿತದ ಬಿಸಿ ಭಾರತಕ್ಕೂ ಸಹ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಹೇಳಿದ್ದಾರೆ...

ಬೀಜಿಂಗ್: ಚೀನಾಗೆ ತಟ್ಟಿರುವ ಆರ್ಥಿಕ ಹಿಂಜರಿತದ ಬಿಸಿ ಭಾರತಕ್ಕೂ ಸಹ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಹೇಳಿದ್ದಾರೆ.

ಚೀನಾ ಆರ್ಥಿಕತೆಯಲ್ಲಿನ ಹಿಂಜರಿತ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ಇದು ವಿರುದ್ಧವಾಗಿದೆ. ಚೀನಾದಲ್ಲಿನ ಆರ್ಥಿಕ ಹಿಂಜರಿತ ಕೇವಲ ಭಾರತದ ಮೇಲೆ ಮಾತ್ರವಲ್ಲ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಭಾರತದಿಂದ ರಫ್ತಾಗುವ ಕೆಲವು ಉತ್ಪನ್ನಗಳಿಗೆ
ಚೀನಾದಲ್ಲಿ ಸಾಕಷ್ಟು ಬೇಡಿಕೆ ಇಲ್ಲ. ಹಲವಾರು ದೇಶಗಳು ಚೀನಾದಿಂದ ಆಮದು ಮಾಡಿಕೊಳ್ಳುವಷ್ಟು ಆ ದೇಶಕ್ಕೆ ರಫ್ತು ಮಾಡುವುದಿಲ್ಲ.

ಇಂತಹ ದೇಶಗಳೆಲ್ಲ ನಮ್ಮಿಂದ ಖರೀದಿಸುವುದು ಕಡಿಮೆ. ಇದರಿಂದ ಭಾರತದ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಹಾಂಕಾಂಗ್ ಮೂಲದ ಮಾರ್ನಿಂಗ್ ಪೋಸ್ಟ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ರಾಜನ್ ಹೇಳಿದ್ದಾರೆ. ಭಾರತ ಗ್ರಾಹಕ ಉತ್ಪನ್ನ ಆಮದು ದೇಶವಾಗಿದ್ದು ದರಗಳು ಕಡಿಮೆಯಾಗಿರುವುದರಿಂದ ಸ್ವಲ್ಪ ಸಹಕಾರಿಯಷ್ಟೆ. ಅದನ್ನು ಬಿಟ್ಟರೆ ಚೀನಾ ಹಿಂಜರಿತ ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!