ಪತಂಜಲಿ ಸಂಸ್ಥೆಯಿಂದ ನೂಡಲ್ಸ್ (ಸಂಗ್ರಹ ಚಿತ್ರ) 
ವಾಣಿಜ್ಯ

ಮ್ಯಾಗಿಗೆ ಎದುರಾಗಿ ಬರುತ್ತಿದೆ ರಾಮದೇವ್ ಅವರ ಪತಂಜಲಿ ನೂಡಲ್ಸ್!

ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಮ್ಯಾಗಿ ನೂಡಲ್ಸ್ ಗಿಂತಲೂ ಕಡಿಮೆ ದರದ ಮತ್ತು ಉತ್ಕೃಷ್ಣ ಗುಣಮಟ್ಟದ ನೂಡಲ್ಸ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ...

ಮುಂಬೈ: ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಮ್ಯಾಗಿ ನೂಡಲ್ಸ್ ಗಿಂತಲೂ ಕಡಿಮೆ ದರದ ಮತ್ತು ಉತ್ಕೃಷ್ಣ ಗುಣಮಟ್ಟದ ನೂಡಲ್ಸ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ.

ವಿಷಕಾರಿ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಭಾರಿ ವಿವಾದಕ್ಕೆ ಗುರಿಯಾಗಿ ಮಾರುಕಟ್ಟೆಯಿಂದ ಹಿಂದಕ್ಕೆ ಸರಿದಿದ್ದ ನೆಸ್ಲೆ ಇಂಡಿಯಾ ಸಂಸ್ಥೆಯ ಮ್ಯಾಗಿ ನೂಡಲ್ಸ್ ಮತ್ತೆ ಮಾರುಕಟ್ಟೆ ಪ್ರವೇಶಕ್ಕೆ ಪ್ರಯತ್ನಿಸುತ್ತಿರುವಾಗಲೇ ಪತಂಜಲಿ ಸಂಸ್ಥೆ ಅದಕ್ಕೆ ತೀವ್ರ ಸ್ಪರ್ಧೆ ನೀಡಲು ಸಜ್ಜಾಗಿ ನಿಂತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ನೂಡಲ್ಸ್ ಗಳಿಗಿಂತಲೂ ಅಗ್ಗದ ದರದಲ್ಲಿ ಮತ್ತು ಉತ್ತಮ ಗುಣಮಟ್ಟದ ಸುರಕ್ಷಿತ ವೆಜ್ ಆಟ್ಟಾ ನೂಡಲ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಪತಂಜಲಿ ಸಂಸ್ಥೆ ಹೇಳಿಕೊಂಡಿದೆ.

ಮೂಲಗಳ ಪ್ರಕಾರ ಪತಂಜಲಿ ವೆಜ್ ಅಟ್ಟಾ ನೂಡಲ್ ಮುಂದಿನ 15 ದಿನಗಳ ಒಳಗಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮ್ಯಾಗಿ ನೂಡಲ್​ಗಿಂತ ಶೇಕಡಾ 30ರಷ್ಟು ಕಡಿಮೆ ದರದಲ್ಲಿ ಪತಂಜಲಿ ಅಟ್ಟಾ ನೂಡಲ್ ಲಭ್ಯವಾಗಲಿವೆ ಎಂದು ತಿಳಿದುಬಂದಿದೆ. ‘70 ಗ್ರಾಂ ತೂಕದ ಪತಂಜಲಿ ವೆಜ್ ಅಟ್ಟಾ ನೂಡಲ್ ಪ್ಯಾಕ್ ದರ 15 ರೂಪಾಯಿ ಎಂದು ನಿಗದಿ ಪಡಿಸಲಾಗುವುದು. ಇದು ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರುತ್ತದೆ ಪತಂಜಲಿ ಸಂಸ್ಥೆ ಹೇಳಿಕೊಂಡಿದೆ. ಅಲ್ಲದೆ ನೂಡಲ್ಸ್ ತಯಾರಿಕೆಗೆ ಬೇಕಾದ ಅಗತ್ಯ ಅನುಮತಿಗಳೆಲ್ಲವನ್ನೂ ಪಡೆಯಲಾಗಿದ್ದು, 10-15 ದಿನಗಳ ಒಳಗಾಗಿ ಪತಂಜಲಿ ಸಂಸ್ಥೆಯ ವೆಜ್ ಆಟ್ಟಾ ನೂಡಲ್ಸ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ’ ಎಂದು ಪತಂಜಲಿ ಉತ್ಪನ್ನಗಳ ಮುಂಬೈ ವಿತರಕ ಪಿಟ್ಟೀ ಸಮೂಹದ ಸಿಇಒ ಆದಿತ್ಯ ಪಿಟ್ಟೀ ಹೇಳಿದ್ದಾರೆ.

ಮಾರುಕಟ್ಟೆಗೆ ಪತಂಜಲಿ ಅಟ್ಟಾ ಪ್ರವೇಶದಿಂದಾಗಿ ನೆಸ್ಲೆ ಕಂಪೆನಿಯ ಮ್ಯಾಗಿಗೆ ಪ್ರಬಲ ಸ್ಪರ್ಧೆ ಎದುರಾಗುವುದರ ಜೊತೆಗೆ ಧಕ್ಕೆ ಉಂಟಾಗಿರುವ ತನ್ನ ಹೆಸರನ್ನು ಮತ್ತೆ ಗಳಿಸಿಕೊಳ್ಳುವ ಹೋರಾಟಕ್ಕೂ ಅದು ಅಣಿಯಾಗಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟಿ20 ವಿಶ್ವಕಪ್ 2026: ಮಕಾಡೆ ಮಲಗಿದ USA ಬ್ಯಾಟಿಂಗ್, ಭಾರತಕ್ಕೆ ಭರ್ಜರಿ ಜಯ, ಶುಭಾರಂಭ!

ಟಿ20 ವಿಶ್ವಕಪ್ 2026: USA ವಿರುದ್ಧ ಸೂರ್ಯ ಭರ್ಜರಿ ಬ್ಯಾಟಿಂಗ್, Babar Azam ದಾಖಲೆ ಧ್ವಂಸ

ಟಿ20 ವಿಶ್ವಕಪ್ 2026: ಕೊನೆಗೂ Virat Kohli ದಾಖಲೆ ಮುರಿದ ಸೂರ್ಯ ಕುಮಾರ್ ಯಾದವ್!

T20 ವಿಶ್ವಕಪ್ 2026: ಅಮೆರಿಕ ವಿರುದ್ಧ ಗೋಲ್ಡನ್ ಡಕೌಟ್; ಕಳಪೆ ದಾಖಲೆ ಬರೆದ Abhishek Sharma!

ನಂಬಿಕೆಯೇ ಭಾರತದ ಬಲಿಷ್ಠ ಕರೆನ್ಸಿ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

SCROLL FOR NEXT