ಬೆಂಗಳೂರು: ಫೆಬ್ರವರಿಯಲ್ಲಿ ನಡೆಯಲಿರುವ ಇನ್‍ವೆಸ್ಟ್ ಕರ್ನಾಟಕ -2016 (ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ) ರ ಲಾಂಛನವನ್ನು ಅ.14ರಂದು ಬಿಡುಗಡೆ ಮಾಡಲಾಗುತ್ತಿದೆ.
ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆ ವಹಿಸುವರು. ಸಮಾವೇಶದ ವೆಬ್‍ಸೈಟ್‍ನ್ನು ಅಂದೇ ಬಿಡುಗಡೆಯಾಗಲಿದೆ. 2016ರ ಫೆಬ್ರವರಿ 3ರಿಂದ 5ರವರೆಗೆ ಸಮಾವೇಶ ನಡೆಯಲಿದೆ.