ಬೆಂಗಳೂರು: ದೇಶದ ಅತಿದೊಡ್ಡ ಆನ್ ಲೈನ್ ರಿಟೇಲ್ ದೈತ್ಯ ಫ್ಲಿಪ್ ಕಾರ್ಟ್ ನ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಅವರು ಬಿಗ್ ಬಿಲಿಯನ್ ಡೇ ವಿಶೇಷ ಹಿನ್ನೆಲೆ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಸ್ವತಃ ಅವರೇ ಡೆಲಿವರಿ ಮಾಡಲಿದ್ದಾರೆ.
ಆನ್ ಲೈನ್ ಮೂಲಕ ಶಾಪಿಂಗ್ ನಡೆಸುತ್ತಿರುವ ಗ್ರಾಹಕರ ಅನುಭವವನ್ನು ಆಲಿಸುವುದು ಮತ್ತು ಲೋಪ ದೋಷಗಳಿದ್ದರೆ ಸರಿಪಡಿಸಿಕೊಳ್ಳುವ ಉದ್ದೇಶದಿಂದಾಗಿ ಸ್ವತಃ ಸಂಸ್ಥಾಪಕರೇ ಡೆಲಿವರಿ ಬಾಯ್ ಆಗಿದ್ದಾರೆ.
ನಿನ್ನೆಯಿಂದಲೇ ಬೆಂಗಳೂರಿನ ಬನ್ಸಾಲ್ ಜೋಡಿ ಡೆಲಿವರಿ ಬಾಯ್ಸ್ ಗಳ ಉಡುಪು ಧರಿಸಿ ಗ್ರಾಹಕರ ಮನೆಗೆ ಅಚ್ಚರಿಯ ಭೇಟಿ ನೀಡಿದ್ದಾರೆ. ಮುಂದಿನ 15-20 ದಿನಗಳ ತನಕ ಕಂಪನಿಯ ಪ್ರತಿಯೊಬ್ಬರೂ ಗ್ರಾಹಕರ ಮನೆಗೆ ತೆರಳಿ, ಅವರು ಬುಕ್ ಮಾಡಿರುವ ಉತ್ಪನ್ನಗಳನ್ನು ಕೈಗಿಡಲಿದ್ದಾರೆ. ಕಂಪನಿಯ ಉನ್ನತ ಹುದ್ದೆಗಳಲ್ಲಿ ಇರುವವರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿನ್ನಿ ಬನ್ಸಾಲ್ ಹೇಳಿದ್ದಾರೆ. ಅಕ್ಟೋಬರ್ 17ಕ್ಕೆ ಬಿಗ್ ಬಿಲಿಯನ್ ಡೇ ವಿಶೇಷ ಮಾರಾಟ ಮುಕ್ತಾಯವಾಗಲಿದೆ.