ವಾಣಿಜ್ಯ

ಅಮೆರಿಕಾ ಮೂಲದ ಕಂಪನಿಯನ್ನು 70 ಮಿಲಿಯನ್ $ ಗೆ ಖರೀದಿಸಿದ ಇನ್ ಫೋಸಿಸ್

Srinivas Rao BV

ಬೆಂಗಳೂರು: ಜಾಗತಿಕ ಸಾಫ್ಟ್ ವೇರ್ ಉದ್ಯಮ ಸಂಸ್ಥೆ ಇನ್ ಫೋಸಿಸ್ ಅಮೆರಿಕಾ ಮೂಲದ ನೋಹಾ ಸಲಹಾ ಸಂಸ್ಥೆಯನ್ನು ಖರೀದಿಸಿದೆ.
ಕ್ಯಾಶ್ ಡೀಲ್ ಮೂಲಕ 70 ಮಿಲಿಯನ್ ಡಾಲರ್(454 ಕೋಟಿ) ಗೆ ಖರೀದಿಸಿರುವ ಇನ್ ಫೋಸಿಸ್ ಇನ್ನು ಮುಂದೆ ಸಂಸ್ಥೆ ತೈಲ ಹಾಗೂ ಅನಿಲ ಕಂಪನಿಗಳಿಗೆ ಜಾಗತಿಕವಾಗಿ ಡೇಟಾ ನಿರ್ವಹಣೆ ಸೇವೆಗಳನ್ನು ಒದಗಿಸುತ್ತವೆ.
ನೋಹಾ ಸಂಸ್ಥೆ ರಿಲ ಹಾಗೂ ಅನಿಲ ಸಂಸ್ಥೆಗಳ ಯೋಜನೆಗಳನ್ನು ಉತ್ತಮಗೊಳಿಸಲು ಸಲಹೆ ನೀಡುತ್ತಿತು. ಈಗ ನೋಹಾ ಸಂಸ್ಥೆಯನ್ನು ಖರೀದಿಸಿರುವ ಇನ್ ಫೋಸಿಸ್ ಡೇಟಾ ನಿರ್ವಹಣೆ ಸೇವೆಗಳನ್ನು ಒದಗಿಸಲಿದೆ. ಸ್ವಾಧೀನ ಪ್ರಕ್ರಿಯೆಂದ ನೋಹದ ಉದ್ಯಮ ಜ್ಞಾನ, ಮಾಹಿತಿ ತಂತ್ರ ಯೋಜನೆ, ಡೇಟಾ ಗೌರ್ನೆನ್ಸ್ ಹಾಗೂ ಇನ್ ಫೋಸಿಸ್ ನ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಸೇವೆಗಳನ್ನು ಒದಗಿಸುವ ಸಾಮರ್ಥ್ಯ ಒಗ್ಗೂಡಲಿದ್ದು ತೈಲ ಮತ್ತು ಅನಿಲ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಇನ್ ಫೋಸಿಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಖರೀದಿ ಪ್ರಕ್ರಿಯೆ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಇನ್ ಫೋಸಿಸ್ ತಿಳಿಸಿದೆ.

SCROLL FOR NEXT