(ಸಾಂದರ್ಭಿಕ ಚಿತ್ರ) 
ವಾಣಿಜ್ಯ

9 ಕೋಟಿ 4ಜಿ ಗ್ರಾಹಕರು

ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ 4ಜಿ ಗ್ರಾಹಕರ ಸಂಖ್ಯೆ 9 ಕೋಟಿಗೆ ಮತ್ತು 4ಜಿ ಸ್ಮಾರ್ಟ್ ಫೋನ್ ಗಳ ಸಂಖ್ಯೆ 18 ಕೋಟಿಗೆ ಹೆಚ್ಚುವ ಅಂದಾಜಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ಹೇಳಿದೆ...

ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ 4ಜಿ ಗ್ರಾಹಕರ ಸಂಖ್ಯೆ 9 ಕೋಟಿಗೆ ಮತ್ತು 4ಜಿ ಸ್ಮಾರ್ಟ್ ಫೋನ್ ಗಳ ಸಂಖ್ಯೆ 18 ಕೋಟಿಗೆ ಹೆಚ್ಚುವ ಅಂದಾಜಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ಹೇಳಿದೆ.

ರಿಲಯನ್ಸ್ ಜಿಯೋ 4ಜಿ ಸೇವೆ ಆರಂಭಿಸುವುದನ್ನು ವಿಳಂಬಗೊಳಿಸಿದರೆ ಏರ್‍ಟೆಲ್, ವೊಡಾ ಫೋನ್ ಮತ್ತು ಐಡಿಯಾ ಸೆಲ್ಯೂಲರ್ ಕಂಪನಿಗಳು ಇದರ ಲಾಭ ಪಡೆಯಲಿವೆ ಎಂದು
ಹೇಳಿದೆ. ಮುಂದಿನ ಕೆಲವು ವರ್ಷಗಳಲ್ಲಿ 3ಜಿ ಮತ್ತು 4ಜಿ ದರಗಳ ನಡುವೆ ಸ್ವಲ್ಪ ಮಾತ್ರ ವ್ಯತ್ಯಾಸ ಇರಲಿದೆ.

ಇದೇ ಸಂದರ್ಭದಲ್ಲಿ ಸ್ಮಾರ್ಟ್ ಫೋನ್‍ಗಳ ದರಗಳು ಗಣನೀಯ ಇಳಿಮುಖ ಕಾಣಲಿದ್ದು 2ಜಿ ಗ್ರಾಹಕರು 4ಜಿಗೆ ವರ್ಗವಾಗಲಿದ್ದಾರೆ ಎಂದಿದೆ. 2019ರ ವೇಳೆಗೆ 4ಜಿಗೆ ಸೇರ್ಪಡೆಯಾಗುವವರ ಸಂಖ್ಯೆ 3ಜಿಗಿಂತಲೂ ಹೆಚ್ಚಾಗಿರಲಿದೆ ಎಂಬ ಅಂದಾಜುಗಳನ್ನು ವರದಿ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!