ನವದೆಹಲಿ: ಬುಧವಾರ ಷೇರು ವಹಿವಾಟು ಆರಂಭಕ್ಕೆ ಸಂವೇದಿ ಸೂಚ್ಯಂಕ ಏರಿಕೆ ಕಂಡುಬಂದರೂ ಮಧ್ಯಾಹ್ನದ ವಹಿವಾಟು ಮುಕ್ತಾಯಕ್ಕೆ ಕುಸಿಯಿತು. 242.88 ಅಂಕ ಕುಸಿದು 25 ಸಾವಿರದ 453ರಲ್ಲಿ ನಿಂತಿತು. ಇದಕ್ಕೆ ಸರ್ಕಾರಕ್ಕೆ ವಿದೇಶಿ ಬಂಡವಾಳ ಹೂಡಿಕೆದಾರರು ಹಿಂದಿನ ಕನಿಷ್ಟ ಪರ್ಯಾಯ ತೆರಿಗೆಯನ್ನು (MAT) ಕಟ್ಟಬೇಕೆಂದು ಆದೇಶ ಹೊರಡಿಸಿರುವುದೂ ಕಾರಣವಾಗಿದೆ.
50 ಷೇರುಗಳನ್ನು ಹೊಂದಿರುವ ನಿಫ್ಟಿ 68.85 ಅಂಕ ಕುಸಿದು 7 ಸಾವಿರದ 717ರಲ್ಲಿ ನಿಂತಿತು. 30 ಷೇರುಗಳನ್ನು ಹೊಂದಿರುವ ಮುಂಬೈ ಷೇರು ಮಾರುಕಟ್ಟೆಯಲ್ಲಿ ಬಿಎಚ್ ಇಎಲ್ ಅತ್ಯಂತ ಕನಿಷ್ಠ ಶೇಕಡಾ 5ರಷ್ಟು ಕುಸಿತ ಕಂಡುಬಂದಿದೆ.
ಆದರೆ ಕನಿಷ್ಟ ಪರ್ಯಾಯ ತೆರಿಗೆಯಿಂದ ವಿದೇಶಿ ಬಂಡವಾಳಗಾರರನ್ನು ಹೊರಗಿಡಲಾಗಿದೆ. ಆದರೂ ಕೂಡ ಷೇರು ಪೇಟೆಯಲ್ಲಿ ಚೇತರಿಕೆ ಕಂಡುಬಂದಿಲ್ಲ.