ಯಾಹೂ ಸಿಇಓ ಮೆರಿಸ್ಸಾ ಮೇಯರ್ (ಸಂಗ್ರಹ ಚಿತ್ರ) 
ವಾಣಿಜ್ಯ

ಯಾಹೂ ಸಿಇಒ ಗರ್ಭಿಣಿ, ಷೇರುದಾರ ಅಯೋಮಯ!

ಇದು ಜಗದ್ವಿಖ್ಯಾತ ಯಾಹೂ ಕಂಪನಿಯ ಸುದ್ದಿ. ಅದರ ಸಿಇಓ ಮೆರಿಸ್ಸಾ ಮೇಯರ್(40) ಅವಳಿ ಮಗುವಿಗೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಆನ್‍ಲೈನ್‍ನಲ್ಲಿ ಹೊರ ಬರುತ್ತಿದ್ದಂತೆಯೇ ಆ ಕಂಪನಿಯ ಷೇರುಗಳು...

ಸಿಇಓ ಪ್ರಸೂತಿರಜೆ ಮೇಲೆ ಹೋದಾರೆಂಬ ಆತಂಕದಲ್ಲಿ ಷೇರು ಕುಸಿತ
ಸುದ್ದಿ ಕೇಳಿದ ಕೂಡಲೇ ಶೇ.2ರಷ್ಟು ಕುಸಿತ ಕಂಡ ಷೇರುಗಳು
15 ದಿನದಲ್ಲಿ ವಾಪಸ್ ಬರುವೆನೆಂಬ ಭರವಸೆ ನೀಡಿದ ಮೆರಿಸ್ಸಾ

ಲಂಡನ್:
ಷೇರು ಮಾರ್ಕೆಟ್‍ನಲ್ಲಿ ಗೂಳಿ ಮತ್ತು ಕರಡಿಗಳು ಯಾವ ಕಾರಣಕ್ಕೆಲ್ಲ ಕುಣಿಯುತ್ತವೆ ಎಂದು ಹೇಳಲಾಗುವುದಿಲ್ಲ. ಚೀನಾದ ಅಧಿಕೃತ ಕರೆನ್ಸಿ ಅಪಮೌಲ್ಯಗೊಂಡರೆ, ಕಚ್ಚಾತೈಲದ ದರ ಏರಿಕೆ, ಇಳಿಕೆಯಾದರೆ ಭಾರತ ಸೇರಿದಂತೆ ವಿಶ್ವಾದ್ಯಂತ ಷೇರುಪೇಟೆ ಅಲ್ಲೋಲ ಕಲ್ಲೋಲವಾಗುವುದು ಕಂಡು ಅಚ್ಚರಿ ಪಟ್ಟಿದ್ದೀರಿ.

ಇವೆಲ್ಲ ಜಾಗತಿಕ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳು. ಆದ್ದರಿಂದ ಸ್ಟಾಕ್ ಎಕ್ಸ್ ಚೇಂಜ್‍ಗಳ ಸೂಚ್ಯಂಕಗಳು ಏರುಪೇರಾಗುತ್ತವೆ. ಆದರೆ, ಯಾವುದೋ ಕಂಪನಿಯ ಯಜಮಾನಿ  ಗರ್ಭಿಣಿ ಆದ ಸುದ್ದಿ ಹೊರಬಿದ್ದ ಕಾರಣಕ್ಕೆ ಸೂಚ್ಯಂಕಗಳು ಧಸಕ್ಕೆಂದು ಕುಸಿಯುವುದು ಎಲ್ಲಾದರೂ ಕೇಳಿದ್ದೀರಾ? ಯಾಹೂ! ಇಲ್ಲಿದೆ ಅಂಥ ಇಂಟರೆಸ್ಟಿಂಗ್ ಸುದ್ದಿ. ಇದು ಜಗದ್ವಿಖ್ಯಾತ ಯಾಹೂ ಕಂಪನಿಯ ಸುದ್ದಿ. ಅದರ ಸಿಇಓ ಮೆರಿಸ್ಸಾ ಮೇಯರ್(40) ಅವಳಿ ಮಗುವಿಗೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಆನ್‍ಲೈನ್‍ನಲ್ಲಿ ಹೊರ ಬರುತ್ತಿದ್ದಂತೆಯೇ ಆ ಕಂಪನಿಯ ಷೇರುಗಳು ಏಕಾಏಕಿ  ಶೇ.2ರಷ್ಟು ಕುಸಿತ ಕಂಡಿವೆ.

ಗರ್ಭಿಣಿಯಾಗಿರುವ ಸುದ್ದಿಯನ್ನು ತಮ್ಮ ಬ್ಲಾಗ್‍ನಲ್ಲಿ ಬಹಿರಂಗಪಡಿಸಿದ ಕೂಡಲೇ ಷೇರುಗಳು ಮಂಕಾಗಿದ್ದು ಖುದ್ದು ಮೆಲ್ಲಿಸಾಗೆ ಅಚ್ಚರಿ ತಂದಿದೆ. ಆದರೆ ಇದು ಕಾಕತಾಳೀಯವೇನಲ್ಲ. ಚೀನಾದ ಬಿಕ್ಕಟ್ಟು ಪರಿಸ್ಥಿತಿಯಿಂದ ಕುಸಿತದ ಭೀತಿ ಇತ್ತಾದರೂ ಸಿಇಒ ಗರ್ಭಿಣಿಯಾದ ಸುದ್ದಿ ಬರುತ್ತಿದ್ದ ಹಾಗೆ ಶೇ.1.99ರಷ್ಟು ಕುಸಿತ ಕಂಡು ನ್ಯೂಯಾರ್ಕ್ ಷೇರುಪೇಟೆಯಲ್ಲಿ ವಹಿವಾಟು  ಪುನಾರಂಭವಾದ ಕೂಡಲೇ ಮತ್ತೆ ಶೇ0.22ರಷ್ಟು ಇಳಿಮುಖವಾಗಿದೆ ಎಂದು ಷೇರು ಪೇಟೆ ಪಂಡಿತರು ತಿಳಿಸಿದ್ದಾರೆ.

``ಇದು ಬೇಸರದ ಸುದ್ದಿಯೇನಲ್ಲ. ಅವರ ಕುಟುಂಬದ ದೃಷ್ಟಿಯಿಂದ ಇದು ಶುಭ ಸುದ್ದಿ. ಮೆಲ್ಲಿಸಾ ರಜೆ ಹೋಗುತ್ತಿರುವುದು ಈ ಕುಸಿತಕ್ಕೆ ಕಾರಣ. ಅವರು ಮಗುವಿಗೆ ಜನ್ಮನೀಡಿ ಕೇವಲ 15  ದಿನಗಳಲ್ಲಿ ವಾಪಸ್ಸಾಗುವುದರಿಂದ, ಶೀಘ್ರದಲ್ಲೇ ಮತ್ತೆ ಏರಿಕೆ ಕಾಣಲಿದೆ. ಮಾರುಕಟ್ಟೆಯಲ್ಲಿ ಅವರ ಮೇಲಿನ ವಿಶ್ವಾಸಾರ್ಹತೆ ಹೆಚ್ಚಲಿದೆ'' ಎಂದು ಕಂಪನಿ ಅಭಿಪ್ರಾಯಪಟ್ಟಿದೆ. 2012ರಲ್ಲಿ  ಗರ್ಭಿಣಿಯಾಗಿ ಗಂಡುಮಗುವಿಗೆ ಜನ್ಮ ನೀಡಿದ್ದ ಮೆಲ್ಲಿಸಾ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದುದಲ್ಲದೆ, 15 ದಿನಗಳಲ್ಲಿ ಕಚೇರಿಗೆ ಹಾಜರಾಗಿದ್ದರು. ಆದರೆ ತಮ್ಮ ಉದ್ಯೋಗಿಗಳಿಗೆ ಮಾತ್ರ  ಮೆಲ್ಲಿಸಾ 16 ವಾರಗಳ ಪ್ರಸೂತಿ ರಜೆ ನೀಡಿದ್ದರೆ ತಂದೆಯಾದವರಿಗೆ 8 ವಾರಗಳ ರಜೆ ಸೌಲಭ್ಯ ಒದಗಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!