ರು.1000 ಮುಖಬೆಲೆಯ ನೋಟು (ಸಂಗ್ರಹ ಚಿತ್ರ) 
ವಾಣಿಜ್ಯ

ಮತ್ತಷ್ಟು ಸುರಕ್ಷತೆಯೊಂದಿಗೆ ಬರಲಿದೆ ರು. 1000 ನೋಟು..!

ಹೆಚ್ಚುತ್ತಿರುವ ಖೋಟಾ ನೋಟು ಹಾವಳಿ, ಹಣಕಾಸು ಅಕ್ರಮ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚು ಸುರಕ್ಷತಾ ಅ೦ಶಗಳನ್ನೊಳಗೊ೦ಡ ರು.1000 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮು೦ದಾಗಿದೆ...

ನವದೆಹಲಿ: ಹೆಚ್ಚುತ್ತಿರುವ ಖೋಟಾ ನೋಟು ಹಾವಳಿ, ಹಣಕಾಸು ಅಕ್ರಮ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚು ಸುರಕ್ಷತಾ  ಅ೦ಶಗಳನ್ನೊಳಗೊ೦ಡ ರು.1000 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮು೦ದಾಗಿದೆ.

ಹೊಸ ನೋಟಿನ ಮುದ್ರಣಕ್ಕಾಗಿ ಸಿಂಗಾಪುರ ಮಾದರಿಯ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗಿದೆ ಎಂದು  ಆರ್ ಬಿಐ ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ವಿಶೇಷ ಭದ್ರತಾ ಗುಣಗಳುಳ್ಳ ರು. 500 ಮುಖಬೆಲೆಯ ಹೊಸ ನೋಟುಗಳು ಈಗಾಗಲೇ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಇದೇ  ಮಾದರಿಯ ರು.1,000 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ರು.1000 ಹೊಸ ನೋಟುಗಳು ಕ್ರಮ ಸ೦ಖ್ಯೆ ಆಕಾರದಲ್ಲಿರುತ್ತದೆ ಎಂದು  ತಿಳಿದುಬಂದಿದೆ.

ನೋಟಿನ ವಿಶೇಷತೆ ಏನು..?
ಹೊಸ ರು.1000 ನೋಟಿನಲ್ಲಿ ಕ್ರಮಸ೦ಖ್ಯೆಗೂ ಮೊದಲು ಭಾರತೀಯ ರುಪಾಯಿಯ ಚಿಹ್ನೆ ಇರಲಿದೆ. ಅಲ್ಲದೆ ಆ೦ಗ್ಲ ಭಾಷೆಯ "ಎಲ್' ಅಕ್ಷರ ಇರಲಿದೆ. ಕ್ರಮಸ೦ಖ್ಯೆ ಗಾತ್ರವನ್ನು ಆರೋಹಣ  ಕ್ರಮದಲ್ಲಿ ನಮೂದಿಸಲಾಗಿರುತ್ತದೆ. ಇದರಿ೦ದ ನೋಟಿನ ಮೇಲೆ ನಕಲಿ ಸಹಿ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!