ಜಿನೀವಾ: ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತ ತುಂಬಾ ಹಿಂದಿದೆ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಹೇಳಿದೆ. ತಲಾ ಆದಾಯ ಕುರಿತಂತೆ ಜಗತ್ತಿನ 38 ಪ್ರಮುಖ ದೇಶಗಳ ಪರಿಸ್ಥಿತಿ ಕುರಿತು ಡಬ್ಲ್ಯುಇಎಫ್ ಕೈಗೊಂಡಿರುವ ಅಧ್ಯಯನ ಇದನ್ನು ಸಾಬೀತುಪಡಿಸಿದೆ.
ಬಹುತೇಕ ದೇಶಗಳಲ್ಲಿ ಆದಾಯ ಹಂಚಿಕೆಯಲ್ಲಿ ತಾರತಮ್ಯ ಇದ್ದು ಭಾರತ ಇದರಿಂದ ಹೊರತಾಗಿಲ್ಲ. ಆದಾಯವನ್ನು ಹಂಚಿಕೆ ಮಾಡುವುದರಲ್ಲಿ ಭಾರತ 7ನೇ ಸ್ಥಾನದಲ್ಲಿದ್ದರೆ, ತೆರಿಗೆ ಕೋಡ್‍ನಲ್ಲಿ 32 ಮತ್ತು ಸಾಮಾಜಿಕ ಭದ್ರತೆಯಲ್ಲಿ 36ನೇ ಸ್ಥಾನದಲ್ಲಿದೆ. ಸ್
ವತ್ತು ನಿರ್ಮಾಣ ಮತ್ತು ಉದ್ಯಮಶೀಲತೆ ಅದರಲ್ಲೂ ವಿಶೇಷವಾಗಿ ಸಣ್ಣ ಪ್ರಮಾಣದ ವಹಿವಾಟು ನಡೆಸುವವರಿಗೆ ಆದ್ಯತೆ ನೀಡಿಲ್ಲ. ಈ ಕ್ಷೇತ್ರದಲ್ಲಿ ಭಾರತ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಭ್ರಷ್ಟಾಚಾರ ವಿಷಯದಲ್ಲಿ ಮುಂಚೂಣಿಯಲ್ಲಿದೆ.
ವಾಣಿಜ್ಯ ಮತ್ತು ರಾಜಕೀಯ ನೈತಿಕತೆ ವಿಷಯದಲ್ಲಿ 12ನೇ ಸ್ಥಾನದಲ್ಲಿದ್ದರೆ, ಸುಸ್ಥಿರ ಕ್ಷೇತ್ರಗಳಲ್ಲಿನ ಬಂಡವಾಳ ತೊಡಗಿಸುವಲ್ಲಿ 11ನೇ ಸ್ಥಾನದಲ್ಲಿದೆ. ಅಂದರೆ ಆರ್ಥಿಕತೆಯಲ್ಲಿ ತೊಡಗಿಸುವ ಬಂಡವಾಳ ಸರಿಯಾಗಿ ಸದುಪಯೋಗವಾಗುತ್ತಿಲ್ಲಎಂದುಅಧ್ಯಯನ ವಿವರಿಸಿದೆ.