ವಾಣಿಜ್ಯ

ಜಾಗತಿಕ ಆರ್ಥಿಕ ಕುಸಿತದ ಪ್ರತಿಕೂಲ ಪರಿಣಾಮಗಳು ಭಾರತಕ್ಕೆ ತಟ್ಟುವುದಿಲ್ಲ: ಅರುಣ್ ಜೇಟ್ಲಿ

Srinivas Rao BV

ಸಿಂಗಪೂರ್: ಜಾಗತಿಕ ಆರ್ಥಿಕ ಕುಸಿತದ ಪ್ರತಿಕೂಲ ಪರಿಣಾಮಗಳಿಂದ ಭಾರತ ರಕ್ಷಿಸಲ್ಪಟ್ಟಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬೇರೆ ರಾಷ್ಟ್ರಗಳ ಮೇಲೆ ಆರ್ಥಿಕ ಕುಸಿತ ಪರಿಣಾಮ ಬೀರುತ್ತಿದ್ದರೂ, ಅದು ಭಾರತವನ್ನು ತಟ್ಟುತ್ತಿಲ್ಲ. ಈಗಲೂ ಭಾರತ ಜಾಗತಿಕ ಆರ್ಥಿಕತೆಯ ಉಜ್ವಲ ತಾಣವಾಗಿದೆ. ಭಾರತ ಚೀನಾ ಉತ್ಪಾದನಾ ಸರಣಿಯ ಭಾಗವಲ್ಲ, ಸರಕುಗಳು ಮತ್ತು ತೈಲ ಉತ್ಪನ್ನಗಳು ವ್ಯತಿರಿಕ್ತ ಪರಿಣಾಮ ಎದುರಿಸುತ್ತಿವೆ. ಆದರೆ ನಿವ್ವಳ ಆಮದು ಮಾಡಿಕೊಳ್ಳುತ್ತಿರುವ ಭಾರತಕ್ಕೆ ಇದರ ಪರಿಣಾಮ ಉಂಟಾಗುತ್ತಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ. 
ಜಾಗತಿಕ ಆರ್ಥಿಕತೆ ಕುಸಿಯುತ್ತಿದ್ದರೂ, ಭಾರತದ ಆರ್ಥಿಕತೆಯ ಭರವಸೆಯ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಜೇಟ್ಲಿ ಹೇಳಿರುವುದನ್ನು ಸಿಂಗಪೂರ್ ನ ಪತ್ರಿಕೆಯೊಂದು ವರದಿ ಮಾಡಿದೆ. ಕೇಂದ್ರ ಸರ್ಕಾರ ಕ್ರಮಬದ್ಧವಾದ ವೇಗದಲ್ಲಿ ಸಾಗುತ್ತಿದೆ, ಸರ್ಕಾರದ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಜೇಟ್ಲಿ ಹೇಳಿದ್ದಾರೆ. ಸೆ.18 ರಂದು ಅರುಣ್ ಜೇಟ್ಲಿ, ಸಿಂಗಪೋರ್ ಶೃಂಗಸಭೆ 2015 ರಲ್ಲಿ ಭಾಗಿಯಾಗಿದ್ದರು.

SCROLL FOR NEXT