ನವದೆಹಲಿ: ಆಗಸ್ಟ್ ತಿಂಗಳಲ್ಲಿ ಕಲ್ಲಿದ್ದಲು, ಕಚ್ಚಾ ತೈಲ, ರಿಫೆೈನರಿ ಸೇರಿದಂತೆ ಎಂಟು ಪ್ರಮುಖ ಕ್ಷೇತ್ರಗಳು ಶೇ.2.6ರಷ್ಟು ಪ್ರಗತಿ ದಾಖಲಿಸಿದೆ. ಕಳೆದ ವರ್ಷ ಆಗಸ್ಟ್ ನ ಶೇ.5.9ಕ್ಕೆ ಹೋಲಿಸಿದರೆ ಭಾರಿ ಇಳಿಮುಖ ಕಂಡಿದೆ.
ಆದರೂ ಈ ಹಿಂದಿನ ತಿಂಗಳು ಜುಲೈನಲ್ಲಿದ್ದ ಶೇ.1.1ಕ್ಕೆ ಹೋಲಿಸಿದರೆ ತುಸು ಏರಿಕೆ ದಾಖಲಿಸಿದೆ. ಕಚ್ಚಾ ತೈಲ, ಕಲ್ಲಿದ್ದಲು, ವಿದ್ಯುತ್, ರಸಗೊಬ್ಬರ, ಉಕ್ಕು, ಸಿಮೆಂಟ್, ನೈಸರ್ಗಿಕ ಅನಿಲ, ರಿಫೆೈನರಿ ಈ ಕ್ಷೇತ್ರದಲ್ಲಿನ ಪ್ರಮುಖ ಉದ್ಯಮಗಳು.
ದೇಶದ ಒಟ್ಟಾರೆ ಕೈಗಾರಿಕಾ ಉತ್ಪಾದನೆಯಲ್ಲಿ ಈ ಎಂಟು ಕ್ಷೇತ್ರಗಳ ಪ್ರಮಾಣ ಶೇ.38ರಷ್ಟು ಇರಲಿದೆ. ಆಗಸ್ಟ್ ತಿಂಗಳಲ್ಲಿ ಉಕ್ಕು ಉತ್ಪಾದನೆ ಮಾತ್ರ ಭಾರಿ ಕುಸಿದಿದೆ.
ಕಳೆದ ವರ್ಷದ ಆಗಸ್ಟ್‍ನಲ್ಲಿ ಶೇ.9.4ರಷ್ಟಿದ್ದ ಉಕ್ಕು ಉದ್ಯಮ ಪ್ರಗತಿ ಶೇ.5.9ಕ್ಕೆ ಇಳಿದಿದೆ. ಕಲ್ಲಿದ್ದಲು, ಸಿಮೆಂಟ್ ಮತ್ತು ವಿದ್ಯುತ್ ಕ್ಷೇತ್ರಗಳ ಪ್ರಗತಿಯೂ ಗಣನೀಯವಾಗಿ ಇಳಿಮುಖ ಕಂಡಿವೆ.