ಬ್ರಿಟನ್ ನ ಟಾಟಾ ಸ್ಟೀಲ್ ಘಟಕ (ಸಂಗ್ರಹ ಚಿತ್ರ) 
ವಾಣಿಜ್ಯ

ಬ್ರಿಟನ್ ಟಾಟಾ ಸ್ಟೀಲ್ ಘಟಕದ ವಿರುದ್ಧ ವಂಚನೆ ಆರೋಪ; ಸರ್ಕಾರದಿಂದ ತನಿಖೆ!

ತೀವ್ರ ನಷ್ಟದ ಹಿನ್ನಲೆಯಲ್ಲಿ ಬ್ರಿಟನ್ ಘಟಕವನ್ನು ಮಾರಾಟ ಮಾಡಲು ಮುಂದಾಗಿದ್ದ ಟಾಟಾ ಸ್ಟೀಲ್ ಸಂಸ್ಥೆಗೆ ಹೊಸ ತಲೆನೋವು ಶುರುವಾಗಿದ್ದು, ಬ್ರಿಟನ್ ಘಟಕದ ವಿರುದ್ಧ ಕ್ರಿಮಿನಲ್ ತನಿಖೆ ಆರಂಭಿಸಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಲಂಡನ್: ತೀವ್ರ ನಷ್ಟದ ಹಿನ್ನಲೆಯಲ್ಲಿ ಬ್ರಿಟನ್ ಘಟಕವನ್ನು ಮಾರಾಟ ಮಾಡಲು ಮುಂದಾಗಿದ್ದ ಟಾಟಾ ಸ್ಟೀಲ್ ಸಂಸ್ಥೆಗೆ ಹೊಸ ತಲೆನೋವು ಶುರುವಾಗಿದ್ದು, ಬ್ರಿಟನ್ ಘಟಕದ ವಿರುದ್ಧ ಕ್ರಿಮಿನಲ್  ತನಿಖೆ ಆರಂಭಿಸಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಖ್ಯಾತ ಆಂಗ್ಲ ಪತ್ರಿಕೆ ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿರುವಂತೆ ಸಂಸ್ಥೆಯ ಬ್ರಿಟನ್ ಘಟಕದ ಕಚೇರಿ ಸಿಬ್ಬಂದಿ ನಕಲಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ್ದಾರೆ ಎಂಬ  ಆರೋಪಗಳು ಕೇಳಿಬರುತ್ತಿವೆ ಎಂದು ವರದಿ ಮಾಡಿದೆ. ಇನ್ನು ಸಂಸ್ಥೆಯೊಳಗಿನ ಈ ಮೋಸ ಪ್ರಕರಣ ಸಂಬಂಧ ಎಸ್ ಎಫ್ ಒ (ಸೀರಿಯಸ್ ಫ್ರಾಡ್ ಆಫೀಸ್) ತನಿಖೆ ನಡೆಸಿದ್ದು, ತನಿಖೆಯ  ಅಂಶಗಳನ್ನು ಮಾಧ್ಯಮಗಳಿಗೆ ಬಹಿರಂಗಗೊಳಿಸಲು ಹಿಂದೇಟು ಹಾಕಿತ್ತಿದೆ. ಆದರೂ, ಅಕ್ರಮದ ನಡೆದಿಲ್ಲ ಎಂಬುದರ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಹಗರಣದ ತನಿಖೆ  ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಯಾವುದೇ ಹೇಳಿಕೆ ನೀಡಲು ತಾನು ಸಿದ್ದವಿಲ್ಲ ಎಂದಷ್ಟೇ ಹೇಳಿದೆ.

ಇನ್ನು ಸಂಸ್ಥೆಯ ಈ ಹಗರಣದಿಂದಾಗಿ ಖ್ಯಾತ ಕಾರು ತಯಾರಿಕಾ ಸಂಸ್ಥೆಗಳಾದ ಬಿಎಇ ಮತ್ತು ರೋಲ್ಸ್ ರಾಯ್ ಸೇರಿದಂತೆ ಸಂಸ್ಥೆಯ ಸುಮಾರು 500ಕ್ಕೂ ಹೆಚ್ಚು ಗ್ರಾಹಕರ ಮೇಲೆ ಗಂಭೀರ  ಪರಿಣಾಮ ಬೀರಲಿದೆ ಎಂದು ಮತ್ತೊಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಅಲ್ಲದೆ ಇದೇ ಕಾರಣಕ್ಕಾಗಿ ಟಾಟಾ ಸಂಸ್ಥೆ ತನ್ನ ಬ್ರಿಟನ್ ಘಟಕವನ್ನು ಮಾರಾಟ ಮಾಡಲು ಮುಂದಾಗಿದೆ ಎಂದೂ  ಪತ್ರಿಕೆ ವರದಿ ಮಾಡಿದೆ.

ಒಟ್ಟಾರೆ ಭಾರತ ದೇಶದ ಹೆಮ್ಮೆಯ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಸಂಸ್ಥೆ ಅಕ್ರಮದ ಆರೋಪದಲ್ಲಿ ಸಿಲುಕಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!