ವಾಣಿಜ್ಯ

2013ರ ನಂತರ ಷೇರು ಮಾರುಕಟ್ಟೆಯಲ್ಲಿ ಕೆಟ್ಟ ವಾರಾಂತ್ಯ ಮುಗಿಸಿದ ಆಪಲ್ ಸಂಸ್ಥೆ

Vishwanath S

ಸ್ಯಾನ್ ಫ್ರಾನ್ಸಿಸ್ಕೋ: ಕಡಿಮೆಗೊಳ್ಳುತ್ತಿರುವ ಐ ಫೋನ್ ಗಳ ಮಾರಾಟದಿಂದಾಗಿ ಆಪಲ್ ಸಂಸ್ಥೆ 2013ರ ಬಳಿಕ ಇದೇ ಮೊದಲ ಬಾರಿಗೆ ಕೆಟ್ಟ ವಾರಾಂತ್ಯ ಅನುಭವಿಸಿದೆ.

ಷೇರು ಮಾರುಕಟ್ಟೆಯಲ್ಲಿ ಕಳೆದ ಐದು ಅವಧಿಗಳಲ್ಲಿ ಶೇಖಡ 11ರಷ್ಟು ಕಡಿತಗೊಂಡಿದ್ದು, ತನ್ನೆಲ್ಲಾ ಷೇರುಗಳನ್ನು ಮಾರಾಟ ಮಾಡಿರುವುದಾಗಿ ಆಪಲ್ ಷೇರು ಹೊಂದಿರುವ ಕಾರ್ಲ್ ಇಕಾಹ್ನ್ ಹೇಳಿದ್ದಾರೆ.  

ಅಮೆರಿಕದಲ್ಲಿ ಐಫೋನ್ ಮಾರಾಟ ನೀರಸವಾಗಿದೆ. ಮೊದಲು ಚೀನಾದ ಆಂಡ್ರಾಯ್ಡ್ ಮೊಬೈಲ್ ಗಳು ಮಾರುಕಟ್ಟೆಗೆ ಬಂದ ನಂತರ ಐಫೋನ್ ಗಳು ಮಾರಾಟದಲ್ಲಿ ಗಣನೀಯ ಇಳಿಕೆಯಾಗಿತ್ತು.

ಐಫೋನ್ ಮಾರಾಟದ ಇತಿಹಾಸದಲ್ಲಿ ಮೊದಲ ಬಾರಿಗೆ ಕುಸಿತ ಕಂಡಿದ್ದರಿಂದ 13 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ತ್ರೈಮಾಸಿಕ ಅವಧಿಯಲ್ಲಿ ಅಮೆರಿಕದ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಆಪಲ್ ಕಂಪೆನಿಯ ಆದಾಯದಲ್ಲಿ ಕುಸಿತವಾಗಿತ್ತು.

SCROLL FOR NEXT