ಭಾರತದ ರಾಷ್ಟ್ರೀಯ ಪಾವತಿಗಳ ಕಾರ್ಪೊರೇಷನ್(ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ-ಎನ್ ಪಿಸಿಐ) ಒಂದು ಏಕೀಕೃತ ಪಾವತಿ ಸಂಪರ್ಕ ವಿಧಾನ(ಯುಪಿಐ) ಮೊಬೈಲ್ ಪಾವತಿ ಪರಿಹಾರವಾಗಿದೆ. ದೇಶದಲ್ಲಿ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿದೆ.ಇದು ರಿಸರ್ವ್ ಬ್ಯಾಂಕಿನ ಅಭಿಯಾನದ ಒಂದು ಭಾಗವಾಗಿದೆ. ಪ್ರಸ್ತುತ 21 ಬ್ಯಾಂಕುಗಳ ಗ್ರಾಹಕರು ಈ ಹೊಸ ಹಣ ಪಾವತಿ ಮಾರ್ಗವನ್ನು ಬಳಸಿಕೊಳ್ಳಬಹುದು. ಇನ್ನಷ್ಟು ಬ್ಯಾಂಕುಗಳು ಮುಂದಿನ ದಿನಗಳಲ್ಲಿ ಯುಪಿಐ ಸೇರುವ ನಿರೀಕ್ಷೆಯಿದೆ.
ಇದರ ಬಗೆಗಿನ ಅಂಶಗಳು ಹೀಗಿವೆ:
1.ಯುಪಿಐ ಮೂಲಕ ಬ್ಯಾಂಕಿನ ಗ್ರಾಹಕರು ಇಮೇಲ್ ತರಹದ ವಾಸ್ತವ ವಿಳಾಸವನ್ನು(virtual address) ಗುರುತಿಸಬಹುದು. ಇಲ್ಲಿ ಬ್ಯಾಂಕು ಖಾತೆ ವಿವರ ನೀಡುವುದಿಲ್ಲವಾದ್ದರಿಂದ ಗ್ರಾಹಕರು ಮುಕ್ತವಾಗಿ ಯುಪಿಐ ಹಣಕಾಸು ವಿಳಾಸಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಗ್ರಾಹಕರು ಮೊದಲು ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು ಉಪಯೋಗಿಸುವ ಮುನ್ನ ದಾಖಲಾತಿ ಮಾಡಿಕೊಳ್ಳಬೇಕು.
2. ಉದಾಹರಣೆಗೆ ಗ್ರಾಹಕರೊಬ್ಬರು ಮೊಬೈಲ್ ನಂಬರನ್ನು ಬಳಸಲು ನಿರ್ಧರಿಸಬಹುದು. ಅಥವಾ ವಾಸ್ತವ ವಿಳಾಸಕ್ಕೆ ಸಣ್ಣ ಹೆಸರನ್ನು ಬಳಸಬಹುದು ಉದಾಹರಣೆಗೆ xyz@icici ಅಥವಾ 13456789@ axis ಇತ್ಯಾದಿ.
3. ಅನೇಕ ಬ್ಯಾಂಕುಗಳಲ್ಲಿ ಬಹು ಖಾತೆಗಳಿಗೆ ಹಲವು ವಾಸ್ತವ ವಿಳಾಸಗಳನ್ನು ಗ್ರಾಹಕರು ಬಳಸಲು ಯುಪಿಐನಲ್ಲಿ ಅವಕಾಶವಿದೆ.
4.ಹಣ ಪಾವತಿ ಮಾಡಲು, ಗ್ರಾಹಕ ಸುರಕ್ಷಿತ ಪಿನ್ ಮೂಲಕ ವ್ಯವಹಾರ ಪ್ರಮಾಣೀಕರಿಸುತ್ತದೆ.
5. ಇಡೀ ದಿನ ಮೊಬೈಲ್ ಪಾವತಿ ಮಾಡಬಹುದು ಮತ್ತು ಅತ್ಯಂತ ತ್ವರಿತಗತಿಯಿಂದ ಸಾಗುತ್ತದೆ.
6. ಆನ್ ಲೈನ್ ವೆಬ್ ಸೈಟ್ ಮೂಲಕ ಯಾವುದಾದರೊಂದು ಉತ್ಪನ್ನವನ್ನು ಖರೀದಿಸಿದರೆ ನಗದು ನೀಡುವ ಬದಲು ಯುಪಿಐ ಆಪ್ ನ್ನು ಬಳಸಬಹುದು. ಉಪಯುಕ್ತ ಬಿಲ್, ಕೌಂಟರ್ ಪಾವತಿ ಮತ್ತು ಶಾಲಾ ಫೀಸು ಕಟ್ಟಲು ಬಳಸಬಹುದು.
7. ಇಂದು ಚಾಲ್ತಿಯಲ್ಲಿರುವ ಐಎಂಪಿಎಸ್ ಪಾವತಿ ವಿಧಾನಕ್ಕಿಂತ ಏಕರೂಪ ಪಾವತಿ ಸುಧಾರಿತ ವ್ಯವಸ್ಥೆಯಾಗಿದ್ದು, ಇದು ದಿನಪೂರ್ತಿ, ವಾರದ ಏಳೂ ದಿನವೂ ಮೊಬೈಲ್, ಇಂಟರ್ನೆಟ್ ಮತ್ತು ಎಟಿಎಂ ಮೂಲಕ ಭಾರತದಾದ್ಯಂತ ಬ್ಯಾಂಕುಗಳ ನಡುವಣ ವಿದ್ಯುನ್ಮಾನ ನಿಧಿ ವರ್ಗಾವಣೆ ವ್ಯವಸ್ಥೆಯನ್ನು ಹೊಂದಿದೆ.
8. ಮುಂದಿನ ಎರಡು-ಮೂರು ದಿನಗಳಲ್ಲಿ ಯುಪಿಐ ಆಪ್ ಗ್ರಾಹಕರಿಗೆ ಸಿಗಲಿದ್ದು ಅದನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಬಳಸಬಹುದು.
9. ಆಂಧ್ರ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಡಿಸಿಬಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಕರ್ನಾಟಕ ಬ್ಯಾಂಕ್, ಯುಕೋ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲಾದ ಬ್ಯಾಂಕ್ ಗಳು ಯುಪಿಐ ವೇದಿಕೆಗೆ ಸೇರಿಕೊಂಡಿವೆ.
10. ಯುಪಿಐ ಯೋಜನೆಗೆ ಇನ್ಫೋಸಿಸ್ ಸಹ ಸ್ಥಾಪಕ ನಂದನ್ ನೀಲೇಕಣಿ ಸಲಹಗಾರರಾಗಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ರಘುರಾಮ್ ರಾಜನ್ ಈ ಹೊಸ ಪಾವತಿ ತಂತ್ರಜ್ಞಾನವನ್ನು ಕಳೆದ ಏಪ್ರಿಲ್ ನಲ್ಲಿ ಆರಂಭಿಸಿದ್ದು, ಅದರ ನಂತರ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics