ವಾಣಿಜ್ಯ

2.5 ಲಕ್ಷ ಕೋಟಿ ಕಪ್ಪುಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಬರುವುದಿಲ್ಲ: ಎಸ್ ಬಿಐ

Srinivasamurthy VN

ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ಈ ಹಿಂದೆ ಇದ್ದ 2.5 ಲಕ್ಷ ಕೋಟಿ ಕಪ್ಪುಹಣ ಮತ್ತೆ ಬ್ಯಾಕಿಂಗ್ ವ್ಯವಸ್ಥೆಗೆ ವಾಪಸಾಗುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಕಳೆದ ನವೆಂಬಕ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಸುಮಾರು 2.5 ಲಕ್ಷ ಕೋಟಿ ರು.ಕಪ್ಪುಹಣ ಮತ್ತೆ ಬ್ಯಾಂಕಿಂಗ್ ವ್ಯವಸ್ಥೆಗೆ  ವಾಪಸಾಗುವುದಿಲ್ಲ ಎಂದು ಎಸ್ ಬಿಐ ಹೇಳಿದೆ. ಆರ್ ಬಿಐ ನ 2016 ಮಾರ್ಚ್ ತಿಂಗಳವರೆಗಿನ ದತ್ತಾಂಶಗಳ ಪ್ರಕಾರ ದೇಶಾದ್ಯಂತ 500 ಮತ್ತು 1000 ರು.ಮುಖಬೆಲೆಯ 14.18 ಲಕ್ಷ ಕೋಟಿ ರು. ನಗದು ಚಲಾವಣೆಯಲ್ಲಿತ್ತು. ಆದರೆ  ನೋಟು ನಿಷೇಧವಾದ ನವೆಂಬರ್ 8ರ ದತ್ತಾಂಶಗಳ ಪ್ರಕಾರ ಈ ಸಂಖ್ಯೆ 15.44 ಲಕ್ಷ ಕೋಟಿಗೇರಿದ್ದು, 1.26 ಲಕ್ಷ ಕೋಟಿ ನಗದು ಹಣ ಏರಿಕೆಯಾಗಿದೆ ಎಂದು ಎಸ್ ಬಿಐ ಹೇಳಿದೆ.

ಅಂತೆಯೇ ನೋಟು ನಿಷೇಧದ ಬಳಿಕ ದೇಶದ ವಿವಿಧ ಬ್ಯಾಂಕುಗಳಿಗೆ ಬರುತ್ತಿರುವ ಠೇವಣಿ ಮೊತ್ತ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನವೆಂಬರ್ 10-17ರವರೆಗೆ 605 ಬಿಲಿಯನ್ ಹಳೆಯ ಹಣ ಠೇವಣಿಯಾಗಿದೆ.  ಅಂಚೆಯೇ ನವೆಂಬರ್ 19ರಿಂದ 27ರವರೆಗೆ 501 ಬಿಲಿಯನ್ ಹಣ ಠೇವಣಿಯಾಗಿದ್ದು, ಠೇವಣಿ ಪ್ರಮಾಣದಲ್ಲಿ ಶೇ.17ರಷ್ಟು ಕುಸಿತ ಕಂಡುಬಂದಿದೆ. ಒಟ್ಟಾರೆ ನವೆಂಬರ್ 10-27ರವರೆಗೆ ಬ್ಯಾಂಗಳಿಗೆ ಠೇವಣಿಯಾಗಿ ಮತ್ತು ಹಣ  ಬದಲಾವಣೆ ರೂಪದಲ್ಲಿ ಒಟ್ಟು 8.44 ಲಕ್ಷ ಕೋಟಿ ಹರಿದುಬಂದಿದೆ.

ಈ ಅಂಕಿ ಅಂಶಗಳ ಪ್ರಕಾರ ನೋಟು ನಿಷೇಧದ ಬಳಿಕ ಅಂತಿಮ ದಿನಾಂಕದೊಳಗೆ 15.44 ಲಕ್ಷ ಕೋಟಿ ಪೈಕಿ ಸುಮಾರು 13 ಲಕ್ಷ ಕೋಟಿ ರು.ಗಳು ಮಾತ್ರ ಬ್ಯಾಂಕುಗಳಿಗೆ ಹರಿದುಬರಲಿದ್ದು, ಉಳಿದ 2.5 ಲಕ್ಷಕ್ಕೂ ಕೋಟಿ ಹಣ  ಬ್ಯಾಂಕಿಂಗ್ ವ್ಯವಸ್ಥೆಗೆ ಬಾರದೇ ಸ್ಥಗಿತಗೊಳ್ಳುತ್ತದೆ ಎಂದು ಎಸ್ ಬಿಐ ಅಂದಾಜಿಸಿದೆ.

SCROLL FOR NEXT