ವಾಣಿಜ್ಯ

ಅಕ್ಟೋಬರ್- ಡಿಸೆಂಬರ್ ನಲ್ಲಿ ಉತ್ಪಾದನಾ ಕ್ಷೇತ್ರದ ಬೆಳವಣಿಗೆ ದರ ಏರಿಕೆ ಸಾಧ್ಯತೆ: ಎಫ್ಐಸಿಸಿಐ

Srinivas Rao BV
ನವದೆಹಲಿ: ರಫ್ತು ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅಕ್ಟೋಬರ್-ಡಿಸೆಂಬರ್ ತಿಂಗಳಲ್ಲಿ ಭಾರತದ ಉತ್ಪಾದನಾ ಕ್ಷೇತ್ರದ ಬೆಳವನಿಗೆ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಫ್ಐಸಿಸಿಐ ಅಂದಾಜಿಸಿದೆ. 
ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಉತ್ಪಾದನಾ ವಲಯದ ಬೆಳವಣಿಗೆ ದರ ಏರಿಕೆಯಾಗಿತ್ತು. ಅಕ್ಟೋಬರ್-ಡಿಸೆಂಬರ್ ತಿಂಗಳಲ್ಲಿ ರಫ್ತು ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಮೀಕ್ಷೆಗೊಳಪಟ್ಟವರು ಈಗಲೂ ಬೆಳವಣಿಗೆ ದರ ಏರಿಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಎಫ್ಐಸಿಸಿಐ ಬಹಿರಂಗಪಡಿಸಿರುವ ಉತ್ಪಾದನಾ ಕ್ಷೇತ್ರಕ್ಕೆ ಸಂಬಂಧಿಸಿದ ಸಮೀಕ್ಷಾ ವರದಿ ಮೂಲಕ ತಿಳಿದುಬಂದಿದೆ. 
ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಬಗ್ಗೆ ನಕಾರಾತ್ಮಕ ಅಂದಾಜುಗಳನ್ನು ವ್ಯಕ್ತಪಡಿಸುತ್ತಿರುವವರ ಸಂಖ್ಯೆ ಕಡಿಮೆಯಾಗಿದ್ದು, ಕೇವಲ ಶೇ.11 ರಷ್ಟು ಮಾತ್ರ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ ಎಂದು ಎಫ್ಐಸಿಸಿಐ ತಿಳಿಸಿದೆ.  ನವೆಂಬರ್ ತಿಂಗಳಲ್ಲಿ ನೋಟು ಅಮಾನ್ಯ ನಿರ್ಧಾರದಿಂದ ಉತ್ಪಾದನಾ ಬೆಳವಣಿಗೆ ದರ ಕುಂಠಿತವಾಗಿತ್ತು. ಆದರೆ ಆರ್ ಬಿಐ ಉತ್ಪಾದನಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ನೀತಿಗಳನ್ನು ಸಡಿಲಗೊಳಿಸುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 
SCROLL FOR NEXT