ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದ ಸೈರಸ್ ಮಿಸ್ತ್ರಿ ಅವರು ಸೋಮವಾರ ಟಾಟಾ ಗ್ರೂಪ್ ಗೆ ಸೇರಿದ ಎಲ್ಲಾ ಕಂಪನಿಗಳಿಗೂ ರಾಜಿನಾಮೆ ನೀಡಿದ್ದಾರೆ.
ಈ ಸಂಬಂಧ ಸೈರಸ್ ಮಿಸ್ತ್ರಿ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ತಾವು ಟಾಟಾ ಗ್ರೂಪ್ ನ ಎಲ್ಲಾ ಸಂಸ್ಥೆಗಳಿಗೂ ರಾಜಿನಾಮೆ ನೀಡಿದ್ದು, ಮುಂದೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಒಂದು ವಾರದ ಹಿಂದಷ್ಟೆ ಟಾಟಾ ಇಂಡಸ್ಟ್ರೀಸ್ ನಿರ್ದೇಶಕ ಮಂಡಳಿಯಿಂದ ಮಿಸ್ತ್ರಿ ಅವರನ್ನು ವಜಾಗೊಳಿಸಲಾಗಿತ್ತು. ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ಮಿಸ್ತ್ರಿ ಅವರನ್ನು ವಿವಿಧ ಕಂಪನಿಗಳ ನಿರ್ದೇಶಕರ ಮಂಡಳಿಯಿಂದ ಹೊರ ಹಾಕಲು ಸಹಕರಿಸುವಂತೆ ಷೇರುದಾರರಿಗೆ ಮನವಿ ಮಾಡಿದ್ದರು.
ಟಾಟಾ ಸನ್ಸ್ ನಿರ್ದೇಶಕ ಸ್ಥಾನದಿಂದ ಅಕ್ಟೋಬರ್ 24ರಂದು ತೆಗೆದು ಹಾಕಿದ ನಂತರವೂ ಮಿಸ್ತ್ರಿ ಅವರು ಗ್ರೂಪ್ ಹಲವು ಸಂಸ್ಥೆಗಳ ಮುಖ್ಯಸ್ಥರಾಗಿ ಮುಂದುವರೆದಿದ್ದರು. ಇದೀಗ ಆ ಎಲ್ಲಾ ಸ್ಥಾನಗಳಿಗೂ ರಾಜಿನಾಮೆ ನೀಡಿದ್ದಾರೆ.