ನವದೆಹಲಿ: ಸರಕುಮುದ್ರೆ ಉಲ್ಲಂಘನೆಯ ಪ್ರಕರಣದಲ್ಲಿ ಅಮೆರಿಕಾ ಮೂಲದ ಇ-ವಾಲೆಟ್ ಕಂಪೆನಿ ಪೆಪಾಲ್ ಚೀನಾ ಮೂಲದ ಭಾರತದ ಪೆಟಿಎಂ ಕಂಪೆನಿ ವಿರುದ್ಧ ಕೇಸು ಹಾಕಿದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.
ತನ್ನ ಕಂಪೆನಿಯ ಚಿಹ್ನೆ, ಬಣ್ಣ ಮತ್ತು ಆಕಾರವನ್ನು ಪೆಟಿಎಂ ಬಳಸಿಕೊಂಡಿದೆ ಎಂದು ಪೆಪಾಲ್ ಆರೋಪಿಸಿದೆ. ಜಾಗತಿಕ ಮಟ್ಟದಲ್ಲಿ ತನ್ನ ಕಂಪೆನಿಯನ್ನು ಎತ್ತರಕ್ಕೆ ಒಯ್ಯಲು ಮತ್ತು ಕಂಪೆನಿಯ ವಹಿವಾಟನ್ನು ವಿಸ್ತರಿಸಲು ಹೀಗೆ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.
ಮೊಬೈಲ್ ವಾಲೆಟ್ ಕಂಪೆನಿಗೆ ಅದು ಕಳುಹಿಸಿದ ನೊಟೀಸಿನಲ್ಲಿ, ಎರಡು ಟೋನ್ ನೀಲಿ ಬಣ್ಣದ ಗುರುತು ಪೆಬಾಲ್ ಬಣ್ಣ ಕೂಡ ಆಗಿದೆ. ಪೆಟಿಎಂ ಬಳಸಿದ ಪೆ ಎನ್ನುವ ಶಬ್ದ ಕೂಡ ಪೆಬಾಲ್ ನ್ನು ಹೋಲುತ್ತದೆ. ತಮ್ಮ ಕಂಪೆನಿಯ ಮೊದಲ ಶಬ್ದದಲ್ಲಿ ಕಡು ನೀಲಿ ಬಣ್ಣವಿದ್ದು, ನಂತರದ ಶಬ್ದದಲ್ಲಿ ಬಣ್ಣ ಸ್ವಲ್ಪ ತಿಳಿಯಾಗಿದೆ. ಪೆಟಿಎಂನ ಬಣ್ಣ ಕೂಡ ಅದೇ ರೀತಿಯಿದೆ. ಬಣ್ಣ, ಆಕಾರ, ಅಂತರ ಎಲ್ಲವೂ ಪೆಬಾಲ್ ನ್ನು ಹೋಲುತ್ತದೆ ಎಂದು ಪೆಟಿಎಂ ಹೇಳಿದೆ.
ಕೇಂದ್ರ ಸರ್ಕಾರ ಅಧಿಕ ಮೌಲ್ಯದ ನೋಟುಗಳನ್ನು ಅಮಾನ್ಯ ಮಾಡಿದ ನಂತರ ದೇಶಾದ್ಯಂತ ಪೆಟಿಎಂ ಬಳಕೆದಾರರ ಸಂಖ್ಯೆ ಜಾಸ್ತಿಯಾಗಿದೆ. ಪೆಟಿಎಂ ಮೂಲಕ ವಹಿವಾಟು ಸುಲಭವಾಗುವುದರಿಂದ ಸಣ್ಣ ಮಟ್ಟದ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಸಹ ಹಣವನ್ನು ಅದರ ಮೂಲಕವೇ ನೀಡುತ್ತಿದ್ದಾರೆ. ಈಗಷ್ಟೇ ತನ್ನ ನೆಲೆ ಕಂಡುಕೊಳ್ಳುತ್ತಿರುವ ಪೆಟಿಎಂಗೆ ಇದೀಗ ಪೆಪಾಲ್ ಕಂಪೆನಿ ನೊಟೀಸ್ ಕಳುಹಿಸಿರುವುದು ನುಂಗಲಾರದ ತುಪ್ಪವಾಗಿದೆ.
ಕಳೆದ ವಾರ 48 ಮಂದಿ ಗ್ರಾಹಕರು 6.15 ಲಕ್ಷ ರೂಪಾಯಿ ಮೋಸ ಮಾಡಿದೆ ಎಂದು ಪೆಟಿಎಂ ದೂರು ನೀಡಿತ್ತು. ಸಿಬಿಐ ಕೇಸು ದಾಖಲಿಸಿಕೊಂಡು ವಂಚನೆ ಕುರಿತು ತನಿಖೆ ನಡೆಸಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos