ವಾಣಿಜ್ಯ

ಡಿಜಿಟಲ್ ಪಾವತಿಗಾಗಿ ಬಿಎಸ್ಎನ್ಎಲ್ ನಿಂದ 15 ಸಾವಿರ ಪಿಒಎಸ್ ಯಂತ್ರ ಲೀಸ್

Lingaraj Badiger
ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ಟೆಲೆಕಾಂ ಕಂಪನಿ ಬಿಎಸ್ಎನ್ಎಲ್ ಗ್ರಾಹಕರು ಡಿಜಿಟಲ್ ಮೂಲಕ ಬಿಲ್ ಪಾವತಿ ಮಾಡುವುದಕ್ಕಾಗಿ 15 ಸಾವಿರ ಪಿಒಎಸ್ ಯಂತ್ರಗಳನ್ನು ಲೀಸ್ ಪಡೆದುವುದಾಗಿ ಘೋಷಿಸಿದೆ.
ಸದ್ಯ ಶೇ.20ರಷ್ಟು ಗ್ರಾಹಕರು ಡಿಜಿಟಲ್ ಮೂಲಕ ಬಿಲ್ ಪಾವತಿ ಮಾಡುತ್ತಿದ್ದು, ಇದನ್ನು ಮಾರ್ಚ್ 2017ರವರೆಗೆ ಶೇ.40ರಷ್ಟು, ಅಂದರೆ ಡಬಲ್ ಮಾಡುವ ಗುರಿ ಹೊಂದಲಾಗಿದೆ ಎಂದು ಬಿಎಸ್ಎನ್ ಎಲ್ ತಿಳಿಸಿದೆ.
ಇ-ಪಾವತಿ ಪ್ರೋತ್ಸಾಹಿಸುವುದಕ್ಕಾಗಿ ನಾವು 15 ಪಾಯಿಂಟ್ ಆಫ್ ಸೇಲ್(ಪಿಒಎಸ್) ಯಂತ್ರಗಳನ್ನು ಲೀಸ್ ಗೆ ಪಡೆಯುತ್ತಿದ್ದು, ಇವುಗಳನ್ನು ಗ್ರಾಹಕ ಸೇವಾ ಕೇಂದ್ರದಲ್ಲಿ ಬಳಸಲಾಗುವುದು ಎಂದು ಬಿಎಸ್ಎನ್ಎನ್ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರಿವಾತ್ಸವ್ ಅವರು ಹೇಳಿದ್ದಾರೆ.
ಪ್ರತಿ ಜಿಲ್ಲೆಯಲ್ಲೂ ಸುಮಾರು 20ರಿಂದ 50 ಗ್ರಾಹಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಶ್ರಿವಾತ್ಸವ್ ಅವರು ತಿಳಿಸಿದ್ದಾರೆ.
SCROLL FOR NEXT