ಗ್ರಾಹಕರಿಗೆ ಶುಭ ಸುದ್ದಿ: ರು.251ಕ್ಕೆ ಸಿಗಲಿದೆ ಸ್ಮಾರ್ಟ್ ಫೋನ್!
ನವದೆಹಲಿ; ಸ್ಮಾರ್ಟ್ ಫೋನ್...ಸ್ಮಾರ್ಟ್ ಫೋನ್ ಎಂದು ಜಪ ಮಾಡುತ್ತಿರುವ ಇಂದಿನ ಯುವಕರು ಇನ್ನು ಮುಂದೆ ಸ್ಮಾರ್ಟ್ ಫೋನ್ ಗಾಗಿ ಸಾವಿರಾರು ರುಪಾಯಿ ಖರ್ಚು ಮಾಡಬೇಕಿಲ್ಲ. ನೋಯ್ಡಾ ಮೂಲದ ಮೊಬೈಲ್ ಕಂಪನಿಯೊಂದು ಕೇವಲ ರು.251ಕ್ಕೆ ಸ್ಮಾರ್ಟ್ ಫೋನ್ ಪರಿಚಯಿಸಲು ಮುಂದಾಗಿದ್ದು, ಕಡಿಮೆ ಅಗ್ಗದ ಈ ಮೊಬೈಲ್ ಫೋನ್ ಇಂದು ಬಿಡುಗಡೆಗೊಳ್ಳಲಿದೆ.
ದೇಶದ ಅಭಿವೃದ್ಧಿ ಪ್ರತಿಯೊಬ್ಬ ವ್ಯಕ್ತಿಗೆ ತಲುಪಬೇಕೆನ್ನುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ನನಸಾಗಿರುವ ಸಲುವಾಗಿ ಈ ಬಗ್ಗೆ ಹೆಜ್ಜೆ ಇಟ್ಟಿರುವ ನೊಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಎಂಬ ಕಂಪನಿ ಇದೀಗ ಅತ್ಯಂತ ಕಡಿಮೆ ಅಗ್ಗದಲ್ಲಿ 'ಫ್ರೀಡಂ 251' ಎಂಬ ಮೊಬೈಲ್ ಫೋನ್'ನ್ನು ಹೊರತಂದಿದೆ.
ಮೊಬೈಲ್ ಫೋನ್ ಇಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದ್ದು, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಬಿಡುಗಡೆ ಮಾಡಲಿದ್ದಾರೆ.
ಈ ಮೊದಲು ರು.500ಕ್ಕೆ ಸ್ಮಾರ್ಟ್ ಫೋನ್ ಹೊರತರುವುದಾಗಿ ಹೇಳಿಕೊಂಡಿದ್ದ ಕಂಪನಿ ಇದೀಗ ಮೊಬೈಲ್ ನ ಸ್ಪಷ್ಟ ಬೆಲೆಯನ್ನು ನಿಗದಿ ಪಡಿಸಿದ್ದು, ಮೊಬೈಲ್ ಬೆಲೆ. ರು.251 ಎಂದು ಹೇಳಿದೆ. ಇದರಂತೆ ಮೊಬೈಲ್ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಕಂಪನಿ ತನ್ನ ವೆಬ್ ಸೈಟ್ ನಲ್ಲಿ ಹಾಕಿಕೊಂಡಿದ್ದು, ಕಂಪನಿ ಹೇಳಿಕೊಂಡಿರುವ ಪ್ರಕಾರ, ಫ್ರೀಡಂ 251 ಮೊಬೈಲ್ ಸ್ಮಾರ್ಟ್ ಫೋನ್ ಆಗಿದ್ದು, 4 ಇಂಚಿನ ಸ್ಪರ್ಶ ಸಂವೇದಿ ಪರದೆ. 1.3 ಗಿಗಾಹರ್ಟ್ಸ್ ಕ್ವಾಡ್ ಕೋಡ್ ಪ್ರಾಸೆಸರ್, 1 ಜಿಬಿ ಆಂತರಿಕ ಮೆಮೊರಿ, 8 ಜಿಬಿ ಮೆಮೊರಿ, 3.2 ಎಂಪಿ ಹಿಂಬದಿ, 0.3 ಎಂಪಿ ಮುಂಬದಿ ಕ್ಯಾಮೆರಾ 1450 ಮಿಲಿ ಆಂಪಿಯರ್ ಅವರ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಈ ಕಡಿಮೆ ಅಗ್ಗದ ಮೊಬೈಲ್ ಗಳನ್ನು ಬುಕ್ ಮಾಡುವ ಅವಾಕಶ ಕೇವಲ ಮೂರುಗಳು ಮಾತ್ರವಿದ್ದು, ಫೆ.18 ಬೆಳಿಗ್ಗೆ 6ಯಿಂದ ಫೆ.21ರ ರಾತ್ರಿ 8 ರವರೆಗೂ ಬುಕ್ ಮಾಡಬಹುದಾಗಿದೆ. ಅಲ್ಲದೆ, ಫೋನ್ ಬುಕ್ ಮಾಡಿದ ಗ್ರಾಹಕರಿಗೆ ಮೊಬೈಲ್ ಗಳು ಜೂನ್ 30 ರಂದು ಸೇರಲಿದೆ ಎಂದು ಕಂಪನಿ ಹೇಳಿಕೊಂಡಿದೆ.