ನವದೆಹಲಿ: ಅಗ್ಗದ ಬೆಲೆಯ ಫ್ರೀಡಂ 251 ಸ್ಮಾರ್ಟ್‌ಫೋನ್ ಒಂದೆಡೆ ಸಂಚಲನ ಸೃಷ್ಟಿಸುತ್ತಿದ್ದರೆ, ಇನ್ನೊಂದಡೆ ಅದರ ಬಗ್ಗೆ ಆರೋಪಗಳೂ ಕೇಳಿ ಬರುತ್ತಿವೆ. ಏತನ್ಮಧ್ಯೆ, ಮೇಕ್ ಇನ್ ಇಂಡಿಯಾಗೂ ಈ ಪ್ರಾಜೆಕ್ಟ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಎಂದು ಡಿಐಪಿಪಿ ಕಾರ್ಯದರ್ಶಿ ಅಮಿತಾಬ್ ಕಾಂತ್ ಟ್ವೀಟ್ ಮಾಡಿದ್ದಾರೆ.
ಫೆ. 19ಕ್ಕೆ ಕಾಂತ್ ಅವರು ಫ್ರೀಡಂ 251 ಸ್ಮಾರ್ಟ್‌ಫೋನ್ ಬಗ್ಗೆ ಪಾಸಿಟಿವ್ ಆಗಿಯೇ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ನೆಟಿಜನ್ ಗಳು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಮೇಕ್‌ಇನ್ ಇಂಡಿಯಾ ಪ್ರತಿನಿಧಿಗಳು ಫ್ರೀಡಂ 252 ಸ್ಮಾರ್ಟ್‌ಫೋನ್ ನ್ನು ಬೆಂಬಲಿಸುತ್ತಿರುವುದನ್ನು ನೆಟಿಜನ್ ಗಳು ಪ್ರಶ್ನಿಸಿದ್ದರು.
ಈಗಾಗಲೇ ಫ್ರೀಡಂ 251 ಸ್ಮಾರ್ಟ್‌ಫೋನ್ ತಯಾರಕರಾದ ರಿಂಗಿಂಗ್ ಬೆಲ್ಸ್ ಕಂಪನಿ ವಿರುದ್ಧ ವಂಚನೆ ಆರೋಪ ಕೇಳಿ ಬರುತ್ತಿದೆ. ಈ ಕಾರಣದಿಂದಲೇ ಕಾಂತ್ ಅವರು ಮೇಕ್ ಇನ್ ಇಂಡಿಯಾಗೂ ಫ್ರೀಡಂ 251 ಸ್ಮಾರ್ಟ್‌ಫೋನ್‌ಗೂ ಸಂಬಂಧವಿಲ್ಲ ಎಂಬ ಟ್ವೀಟ್ ಮಾಡಿದ್ದಾರೆ.