ವಾಣಿಜ್ಯ

ಸ್ಟಾರ್ಟ್‍ಅಪ್‍ಗೆ ಇಫ್ಕೊನಿಧಿ

Mainashree
ನವದೆಹಲಿ: ದೇಶದ ಅತಿದೊಡ್ಡ ರಸಗೊಬ್ಬರ ತಯಾರಿಕಾ ಕಂಪನಿ ಇಫ್ಕೊ ಸ್ಟಾರ್ಟ್‍ಅಪ್‍ಗಳಲ್ಲಿ ಹೂಡಿಕೆಗೆ ಮುಂದಾಗಿದ್ದು ಇದಕ್ಕಾಗಿ ರು.10 ಕೋಟಿ ನಿಧಿ ಸ್ಥಾಪಿಸಿದೆ. 
ಹೆಚ್ಚಾಗಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಐಡಿಯಾಗಳು, ಪ್ರಸ್ತಾವನೆ ಮತ್ತು ಯೋಜನೆಗಳು ಬಂದಲ್ಲಿ ಅವುಗಳಿಗೆ ನೆರವು ನೀಡುವುದಾಗಿ ಇಫ್ಕೊವ್ಯ ವಸ್ಥಾಪಕ ನಿರ್ದೇಶಕ ಯು.ಎಸ್.ಅವಸ್ತಿ ತಿಳಿಸಿದ್ದಾರೆ. 
ಅಗತ್ಯ ಬಿದ್ದಲ್ಲಿ ಈ ನಿಧಿಯ ಮೊತ್ತವನ್ನು ಮತ್ತಷ್ಟು ಹೆಚ್ಚಿಸುವುದಾಗಿಯೂ ಅವರು ಹೇಳಿದ್ದಾರೆ. ಹೊಸ ವಾಣಿಜ್ಯ ಯೋಜನೆಗಳು ಮತ್ತು ಸ್ಟಾರ್ಟ್‍ಅಪ್‍ಗಳಿಗೆ ಸಂಬಂಧಿಸಿದಂತೆ ಕಂಪನಿ ಸಿಬ್ಬಂದಿ ಮತ್ತು ಸಹಕಾರ ಸಂಸ್ಥೆಗಳಿಂದ ಐಡಿಯಾಗಳು ನೀಡುವಂತೆ ಕೋರಿರುವುದಾಗಿಯೂ ಹೇಳಿದ್ದಾರೆ.
SCROLL FOR NEXT