ಮುಂಬೈ: ಡಿಸೆಂಬರ್‍ಗೆ ಅಂತ್ಯಗೊಂಡ ಪ್ರಸಕ್ತ ಸಾಲಿನ ಮೂರನೆ ತ್ರೈಮಾಸಿಕದಲ್ಲಿ ಟಾಟಾ ಕನ್ಸಲ್ಟೆನ್ಸಿ ನಿವ್ವಳ ಲಾಭ ಶೇ.14.18ರಷ್ಟು ಏರಿಕೆ ಕಂಡಿದ್ದು ರು.6,083.39 ಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ ರು.5,327.55 ಕೋಟಿ ಗಳಿಸಿತ್ತು. ಆದರೂ ತ್ರೈಮಾಸಿಕದಿಂದ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಶೇ.0.02ರಷ್ಟು ಇಳಿಮುಖ ಕಂಡಿದೆ. ಕಂಪನಿ ಆದಾಯದಲ್ಲೂ ಶೇ.11.7ರಷ್ಟು ಏರಿಕೆ ಕಂಡಿದ್ದು ರು.27,364 ಕೋಟಿಗೆ ತಲುಪಿದೆ. ಇದೇ ಸಂದರ್ಭದಲ್ಲಿ ಕಂಪನಿ ಪ್ರತಿ ಷೇರಿಗೆ ರು.5.50 ಮಧ್ಯಂತರ ಲಾಭಾಂಶ ಘೋಷಿಸಿದೆ. ಚೆನ್ನೈನಲ್ಲಿ ಸಂಭವಿಸಿದ ಪ್ರವಾಹ ಕಂಪನಿ ಆದಾಯಕ್ಕೆ ಹಿನ್ನಡೆಯುಂಟು ಮಾಡಬಹುದು ಎಂದು ಕಂಪನಿ ಈ ಹಿಂದೆ ಹೇಳಿತ್ತು.