ಇಂದ್ರಾನೂಯಿ ಉದಾರಿ
ಜಗತ್ತಿನ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಹಳೆ ವಿದ್ಯಾರ್ಥಿಯಾಗಿರುವ ಪೆಪ್ಸಿಕೊ ಸಿಇಒ ಭಾರತೀಯ ಮೂಲದ ಇಂದ್ರ ನೂಯಿ ಉದಾರವಾಗಿ ದಾನ ಮಾಡಿದ್ದಾರೆ...
ನ್ಯೂಯಾರ್ಕ್: ಜಗತ್ತಿನ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಹಳೆ ವಿದ್ಯಾರ್ಥಿಯಾಗಿರುವ ಪೆಪ್ಸಿಕೊ ಸಿಇಒ ಭಾರತೀಯ ಮೂಲದ ಇಂದ್ರ ನೂಯಿ ಉದಾರವಾಗಿ ದಾನ ಮಾಡಿದ್ದಾರೆ.
ಹಳೆ ವಿದ್ಯಾರ್ಥಿಗಳು ಇದುವರೆಗೂ ದಾನ ಮಾಡಿರುವುದಕ್ಕಿಂತಲೂ ಇದೇ ಹೆಚ್ಚು ಎಂದು ವಿವಿ ಹೇಳಿದೆ. ಇದರ ಗೌರವಾರ್ಥವಾಗಿ ಬಿಸ್ಕೂಲ್ ಇಂದ್ರನೂಯಿಗೆ ಗೌರವ ಡೀನ್ಶಿಪ್ ನೀಡಿದೆ. ವಿವಿಗೆ ಎಷ್ಟು ಹಣ ಕೊಡುಗೆ ನೀಡಲಾಯಿತು ಎಂಬುದನ್ನು ಇಂದ್ರನೂಯಿ ಬಹಿರಂಗಪಡಿಸಿಲ್ಲ. ಈ ಹಣವನ್ನು ಇನೋವೇಷನ್ ನಿಧಿಯಾಗಿ ರೂಪಿಸಲಾಗುವುದು ಎಂದು ಹೇಳಲಾಗಿದೆ. ಗೌರವ ಡೀನ್ಶಿಪ್ ಪಡೆದಿರುವ ಮೊದಲ ಮಹಿಳೆಯೂ ಇಂದ್ರನೂಯಿ ಆಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.