ಕುಸಿತ ಮುಂದುವರೆಸಿದ ಷೇರುಪೇಟೆ
ದೇಶೀಯ ಷೇರು ಮಾರುಕಟ್ಟೆಗಳು ಕುಸಿತ ಮುಂದುವರೆಸಿವೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 317.93 ಅಂಕ ನಷ್ಟ ಕಂಡು 24,455.04ಕ್ಕೆ ಕುಸಿದಿದೆ...
ಮುಂಬೈ: ದೇಶೀಯ ಷೇರು ಮಾರುಕಟ್ಟೆಗಳು ಕುಸಿತ ಮುಂದುವರೆಸಿವೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 317.93 ಅಂಕ ನಷ್ಟ ಕಂಡು 24,455.04ಕ್ಕೆ ಕುಸಿದಿದೆ.
ಸೆನ್ಸೆಕ್ಸ್ ನ ಈ ಹಂತ ಕಳೆದ 19 ತಿಂಗಳಲ್ಲಿಯೇ ಕನಿಷ್ಠವಾಗಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 99 ಅಂಕ ನಷ್ಟದೊಂದಿಗೆ 7,437.80ಕ್ಕೆ ತಲುಪಿದೆ.ವಹಿವಾಟಿನ ಬಹುತೇಕ ಅವಧಿಯಲ್ಲಿ ಮಾರುಕಟ್ಟೆ ನೆಗೆಟಿವ್ ವಲಯದಲ್ಲೇ ಮುನ್ನಡೆದಿತ್ತು. ಮಧ್ಯಾವಧಿ ನಂತರ ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದ್ದರಿಂದ ಮತ್ತು ಕಚ್ಚಾ ತೈಲ ದರ ಮತ್ತಷ್ಟು ಕುಸಿದಿದ್ದರಿಂದ ಹೂಡಿಕೆದಾರರು ಹೆಚ್ಚಿನ ಮಾರಾಟದಲ್ಲಿ ತೊಡಗಿದರು.
ರೂಪಾಯಿ ಮೌಲ್ಯ ಸಹ 29 ತಿಂಗಳಲ್ಲೇ ಕನಿಷ್ಠ 67.70ಕ್ಕೆ ಕುಸಿದಿದ್ದು ಹೂಡಿಕೆದಾರರಲ್ಲಿ ಮತ್ತಷ್ಟು ಭೀತಿ ತಂದಿತು. ವಹಿವಾಟು ಸಕಾರಾತ್ಮಕವಾಗಿಯೇ ಆರಂಭವಾಯಿತು. ಒಂದು ಹಂತದಲ್ಲಿ ದಿನದ ಗರಿಷ್ಠ 24,912.64ಕ್ಕೆ ಏರಿಕೆ ಕಂಡಿತ್ತು. ಆದರೂ ಏರಿಕೆಯನ್ನು ಕಾಯ್ದುಕೊಳ್ಳುವಲ್ಲಿ ಮಾರುಕಟ್ಟೆ ವಿಫಲವಾಯಿತು. ರಿಯಾಲ್ಟಿ, ವಿದ್ಯುತ್, ಬ್ಯಾಂಕಿಂಗ್, ಪಿಎಸ್ಯು, ಮೂಲಸೌಕರ್ಯ ಹೆಚ್ಚು ನಷ್ಟ ಕಂಡವು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.