ಎಡವಟ್ಟು ಮಾಡಿದ ಆರ್ಬಿಐ
ನೋಟುಗಳು ಅಸಲಿ ಎಂದು ಸಾಬೀತುಪಡಿಸುವ ಬೆಳ್ಳಿಯ ಎಳೆ ಇಲ್ಲದ ರು.1,000 ಮುಖ ಬೆಲೆಯ ನೋಟುಗಳು ಕಣ್ತಪ್ಪಿನಿಂದ ಚಾಲ್ತಿಗೆ ಬಂದಿರುವುದಾಗಿ ಆರ್ಬಿಐ ಒಪ್ಪಿಕೊಂಡಿದೆ...
ಮುಂಬೈ: ನೋಟುಗಳು ಅಸಲಿ ಎಂದು ಸಾಬೀತುಪಡಿಸುವ ಬೆಳ್ಳಿಯ ಎಳೆ ಇಲ್ಲದ ರು.1,000 ಮುಖ ಬೆಲೆಯ ನೋಟುಗಳು ಕಣ್ತಪ್ಪಿನಿಂದ ಚಾಲ್ತಿಗೆ ಬಂದಿರುವುದಾಗಿ ಆರ್ಬಿಐ ಒಪ್ಪಿಕೊಂಡಿದೆ.
5ಎಜಿ ಮತ್ತು 3ಎಪಿ ಸರಣಿಯ ನೋಟುಗಳು ಬೆಳ್ಳಿ ಎಳೆ ಇಲ್ಲದೆಂಯೇ ಮಧ್ಯಪ್ರದೇಶದ ಹೋಶಂಗಾಬಾದ್ನ ಪ್ರೆಸ್ನಲ್ಲಿ ಮುದ್ರಣವಾಗಿ ಹಂಚಿಕೆಯಾಗಿವೆ. ಆದರೆ ಎಷ್ಟು ಮೌಲ್ಯದ ನೋಟುಗಳು ಚಲಾವಣೆಯಾಗಿದೆ ಎಂದು ತಿಳಿದು ಬಂದಿಲ್ಲ ಎಂದು `ಸಿಎನ್ಎನ್ ಐಬಿಎನ್' ವರದಿ ಮಾಡಿದೆ. ಬೆಳ್ಳಿ ಎಳೆ ಇಲ್ಲದಿದ್ದರೆ ನೋಟುಗಳಿಗೆ ಮಾನ್ಯತೆ ಇರುವುದಿಲ್ಲ. ಸಾರ್ವಜನಿಕರು ಇಂಥ ನೋಟುಗಳನ್ನು ಬ್ಯಾಂಕ್ಗಳಿಗೆ ತೆಗೆದುಕೊಂಡು ಬಂದಲ್ಲಿ ಅವುಗಳನ್ನು ಬದಲಾಯಿಸಿಕೊಡಬೇಕೆಂದು ಆರ್ಬಿಐ ಸೂಚನೆ ನೀಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.