ವಾಣಿಜ್ಯ

ವಿಮೆ ಕ್ಷೇತ್ರಕ್ಕೆ 12 ಸಾವಿರ ಕೋಟಿ ಎಫ್ ಡಿಐ

Srinivasamurthy VN

ನವದೆಹಲಿ: ಪ್ರಸಕ್ತ ವರ್ಷದಲ್ಲಿ ದೇಶದ ವಿಮಾ ಕ್ಷೇತ್ರಕ್ಕೆ ರು.12 ಸಾವಿರ ಕೋಟಿ ವಿದೇಶಿ ನೇರ ಬಂಡವಾಳ ಬರುವ ಅಂದಾಜುಗಳಿವೆ.

ದೇಶದ ಖಾಸಗಿ ವಿಮಾ ಕಂಪನಿಗಳೊಂದಿಗೆ ಜಂಟಿ ಉದ್ಯಮ ಸ್ಥಾಪಿಸಿರುವ ಬಹುತೇಕ ವಿದೇಶ ಕಂಪನಿಗಳು ತಮ್ಮ ಪಾಲನ್ನು ಹೆಚ್ಚಿಸುವ  ನಿರೀಕ್ಷೆಗಳಿವೆ ಎಂದು ಭಾರತೀಯ ಉದ್ಯಮಗಳ  ಒಕ್ಕೂಟ ಅಸೋಚಾಮ್ ಹೇಳಿದೆ. ವಿಮೆ ಕ್ಷೇತ್ರದಲ್ಲಿ ಎಫ್ ಡಿಐ ಕಾಯ್ದೆಗೆ ತಿದ್ದುಪಡಿ ತಂದಿರುವುದಾಗಿ ಮರು-ವಿಮೆ ಕ್ಷೇತ್ರದಲ್ಲೂ ಸಹ ಈ ವರ್ಷ ಹೆಚ್ಚಿನ ವಿದೇಶಿ ಹೂಡಿಕೆ ಹರಿದುಬರಲಿದೆ ಎಂದು  ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿಎಸ್ ರಾವತ್ ಹೇಳಿದ್ದಾರೆ.

ಫ್ರಾನ್ಸ್ ನ ಅಕ್ಸಾ, ಬ್ರಿಟನ್ ಬೂಪ, ಜಪಾನ್ ನ ನಿಪ್ಟಾನ್ ಸೇರಿದಂತೆ ಹಲವಾರು ಕಂಪನಿಗಳು ಭಾರತದಲ್ಲಿ ಜಂಟಿ ಉದ್ಯಮ ಹೊಂದಿವೆ. ವಿಮೆ ಕ್ಷೇತ್ರದಲ್ಲಿ ಎಫ್ ಡಿಐ ಮಿತಿಯನ್ನು ಶೇ.26ರಿಂದ  49ಕ್ಕೆ ವಿಸ್ತರಿಸಿರುವುದರಿಂದ ಈ ಕಂಪನಿಗಳೆಲ್ಲ ಹೂಡಿಕೆ ಹೆಚ್ಚಿಸಲಿವೆ. ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ರಕ್ಷಣೆ, ವಿಮೆ, ಬ್ಯಾಕಿಂಗ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಎಫ್ ಡಿಐ ಮಿತಿ  ಹೆಚ್ಚಿಸಿತು. ರಿಟೇಲ್, ಔಷಧ ಕ್ಷೇತ್ರಗಳಲ್ಲಿ ಶೇಕಡ ನೂರರಷ್ಟು ಎಫ್ ಡಿಐಗೆ ಅನುಮತಿ ನೀಡಲಾಗಿದೆ.

SCROLL FOR NEXT