ಮುಂಬೈ: ಕಳೆದ ವಾರ ಇಳಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಏರಿಕೆಯತ್ತ ಮುಖಮಾಡಿದ್ದು, ಶುಕ್ರವಾರ ಮಧ್ಯಾಹ್ನದ ವಹಿವಾಟಿನ ವೇಳೆಗೆ 277 ಅಂಕಗಳ ಏರಿಕೆ ಕಂಡಿದೆ.
ಫೆಬ್ರವರಿ ತಿಂಗಳಲ್ಲಿ ಹೊಸ ಉತ್ಪನ್ನಗಳ ಸರಣಿ ಬಿಡುಗಡೆಯಿದ್ದು, ಇದರಿಂದ ಉತ್ತೇಜನಗೊಂಡಿರುವ ಬಂಡವಾಳದಾರರು ಹೂಡಿಕೆಯತ್ತ ಆಸಕ್ತಿ ತೋರಿದ ಪರಿಣಾಮ ಸೆನ್ಸೆಕ್ಸ್ ಶೇ.1.13ರಷ್ಟು ಏರಿಕೆಯಾಯಿತು. ಒಟ್ಟು 227 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ ಒಟ್ಟು 24,747.05 ಅಂಶಗಳೊಂದಿಗೆ ಸ್ಥಿರವಾಗಿದ್ದು, ನಿಫ್ಟಿ ಕೂಡ 92.30 ಅಂಕಗಳ ಏರಿಕೆಯೊಂದಿಗೆ 7,516.95 ಅಂಶಗಳಿಗೇರಿತು.
ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಕೋಲ್ ಇಂಡಿಯಾ (ಶೇ.5.5), ಹೀರೋ ಮೋಟಾರ್ ಕಾರ್ಪ್ (ಶೇ.3.5) ಹೆಚ್ ಡಿಎಫ್ ಸಿ (ಶೇ.2.9) ಸನ್ ಫಾರ್ಮಾ (ಶೇ.2.8) ಮತ್ತು ಒಎನ್ ಜಿಸಿ (ಶೇ.2.3) ಹೆಚ್ಚು ಲಾಭ ಕಂಡ ಸಂಸ್ಥೆಗಳಾಗಿವೆ. ಉಳಿದಂತೆ ಬ್ಯಾಂಕಿಂಗ್ ಕ್ಷೇತ್ರ ಅಲ್ಪ ನಷ್ಟ ಅನುಭವಿಸಿದ್ದು, ಐಸಿಐಸಿಐ, ಎಸ್ ಬಿಐ ನಷ್ಟ ಅನುಭವಿಸಿದವು. ಇದಲ್ಲದೆ ಮಾರುತಿ ಸಂಸ್ಥೆ ಮತ್ತು ಲುಪಿನ್ ಮತ್ತು ಭಾರ್ತಿ ಏರ್ ಟೆಲ್ ಸಂಸ್ಥೆ ನಷ್ಟಅನುಭವಿಸಿದವು.