ವಾಣಿಜ್ಯ

ಇನ್ನು ಮುಂದೆ ಸ್ನ್ಯಾಪ್ ಡೀಲ್ ನಲ್ಲಿ ವಿಮಾನ ಟಿಕೆಟ್ ಕಾಯ್ದಿರಿಸಿ, ಆಹಾರ ಖರೀದಿಸಿ

Guruprasad Narayana
ನವದೆಹಲಿ: ಇ-ಕಾಮರ್ಸ್ ತಾಣ ಸ್ನ್ಯಾಪ್ ಡೀಲ್, ಹೆಚ್ಚುವರಿ ಸೇವೆಗಳನ್ನು ಒದಗಿಸುವುದಾಗಿ ಸೋಮವಾರ ಘೋಷಿಸಿದೆ. ಇನ್ನು ಮುಂದೆ ಇದರ ಬಳಕೆದಾರರು ಬಸ್ ಮತ್ತು ವಿಮಾನ ಟಿಕೆಟ್ ಗಳನ್ನು ಖರಿಸಿಸಬಹುದು ಹಾಗೂ ಹೋಟೆಲ್ ಕೊಠಡಿ ಕಾಯ್ದಿರಿಸಿ ಆಹಾರ ಪದಾರ್ಥಗಳನ್ನು ಖರೀದಿಸಬಹುದು.
ಇದಕ್ಕಾಗಿ ಸ್ನ್ಯಾಪ್ ಡೀಲ್ ಸಂಸ್ಥೆ ಕ್ಲಿಯರ್ ಟ್ರಿಪ್, ರೆಡ್ ಬಸ್, ಅರ್ಬನ್ ಕ್ಲ್ಯಾಪ್ ಮತ್ತು ಜೊಮ್ಯಾಟೋ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. 
2020 ರ ವೇಳೆಗೆ ಅಂತರ್ಜಾಲ ಸೇವೆ ಭಾರತದಲ್ಲಿ 100 ಬಿಲಿಯನ್ ಉದ್ದಿಮೆಯಾಗಿ ಬೆಳೆಯಲಿದೆ ಎನ್ನಲಾಗಿದೆ. "ನಾವು ಅತ್ಯುತ್ತಮ ಸೇವೆ ನೀಡುತ್ತಿರುವ ಇ-ಕಾಮರ್ಸ್ ತಾಣವನ್ನು ಬಲಪಡಿಸುವ ನಿಟ್ಟಿನಲ್ಲಿ ಗ್ರಾಹಕರ ಆದ್ಯತೆ ಮೇರೆಗೆ ಹೊಸ ಸೇವೆಗಳನ್ನು ಒದಗಿಸಲಿದ್ದೇವೆ" ಎಂದು ಸ್ನ್ಯಾಪ್ ಡೀಲ್ ಸಹಸಂಸ್ಥಾಪಕ ರೋಹಿತ್ ಬನ್ಸಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಈ ತಾಣದಲ್ಲಿ ಗ್ರಾಹಕರಿಗೆ ಅತ್ಯುತ್ತಮ ರಿಯಾಯಿತಿ ಕೂಡ ದೊರಕಲಿದೆ ಎಂದು ಸಂಸ್ಥೆ ಘೋಷಿಸಿದೆ. 
"ಈ ಹೊಸ ಸೇವೆಗಳನ್ನು ಒದಗಿಸುವುದರೊಂದಿಗೆ 2020 ರ ಹೊತ್ತಿಗೆ ಸ್ನ್ಯಾಪ್ ಡೀಲ್ ದಿನಂಪ್ರತಿ 20 ದಶಲಕ್ಷ ಬಳಕೆದಾರರನ್ನು ಹೊಂದುವ ಗುರಿ ಹೊಂದಿದೆ" ಎಂದು ಬನ್ಸಾಲ್ ಹೇಳಿದ್ದಾರೆ. 
SCROLL FOR NEXT