ಪತಂಜಲಿ ಜಾಹಿರಾತುಗಳು ಜನರನ್ನು ದಾರಿತಪ್ಪಿಸುತ್ತಿವೆ: ಎಎಸ್ ಸಿಐ 
ವಾಣಿಜ್ಯ

ಪತಂಜಲಿ ಜಾಹಿರಾತುಗಳು ಜನರನ್ನು ದಾರಿತಪ್ಪಿಸುತ್ತಿವೆ: ಎಎಸ್ ಸಿಐ

ಜಾಹಿರಾತು ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆ ಎಎಸ್ ಸಿಐ, ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯ ಜಾಹಿರಾತುಗಳ ಬಗ್ಗೆ ತಕರಾರು ತೆಗೆದಿದ್ದು,...

ನವದೆಹಲಿ: ಜಾಹಿರಾತು ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆ ಎಎಸ್ ಸಿಐ, ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯ ಜಾಹಿರಾತುಗಳ ಬಗ್ಗೆ ತಕರಾರು ತೆಗೆದಿದ್ದು, ತನಗೆ ಪೈಪೋಟಿ ನೀಡುತ್ತಿರುವ ಸಂಸ್ಥೆಗಳನ್ನು ಹೀಗಳೆಯಲು ಯತ್ನಿಸುತ್ತಿದೆ ಎಂದು ಹೇಳಿದೆ.

ಉಳಿದ ಕಂಪೆನಿಗಳಿಗಿಂತ ತನ್ನ ಕಂಪನಿಯ ಉತ್ಪನ್ನಗಳು ಉತ್ತಮವಾದುದ್ದೆಂದು ಪ್ರಚಾರ ಮಾಡುವ ಭರದಲ್ಲಿ ಪತಂಜಲಿ ಆಯುರ್ವೇದ ತನಗೆ ಪೈಪೋಟಿ ನೀಡುತ್ತಿರುವ ಸಂಸ್ಥೆಗಳನ್ನು ಹೀಗಳೆಯಲು ಯತ್ನಿಸುತ್ತಿರುವುದು ಸೂಕ್ತವಲ್ಲ ಎಂದು ಎಎಸ್ ಸಿಐ ಹೇಳಿದೆ.

ಪತಂಜಲಿ ಉತ್ಪನ್ನಗಳಲ್ಲಿ ಒಂದಾಗಿರುವ ಸಾಸಿವೆ ಎಣ್ಣೆಯ ಜಾಹಿರಾತಿನಲ್ಲಿ ಪತಂಜಲಿ ಸಂಸ್ಥೆ ಬೇರೆಯ ಸಂಸ್ಥೆಗಳು ಮಾರಾಟ ಮಾಡುವ ಸಾಸಿವೆ ಎಣ್ಣೆ ಕಲಬೆರಕೆಯಾಗಿರುತ್ತದೆ ಎಂದು ಜಾಹೀರಾತುಗಳಲ್ಲಿ ಹೇಳಿದೆ. ಆದರೆ ಈ ಅಂಶ ಈವರೆಗೂ ಸಾಬೀತಾಗಿಲ್ಲ. ಅನ್ಯ ಕಂಪನಿಗಳ ಉತ್ಪನ್ನಗಳನ್ನು ಹೀಗಳೆಯುವುದಷ್ಟೇ ಅಲ್ಲದೆ, ಪತಂಜಲಿ ಉತ್ಪನ್ನಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಎಎಸ್ ಸಿ ಐ ಹೇಳಿದ್ದು, ಪಂತಂಜಲಿ ಸಂಸ್ಥೆಯ ರೀತಿಯಲ್ಲೇ ಹಲವು ಕಂಪನಿಗಳ ಜಾಹಿರಾತುಗಳ ಬಗ್ಗೆ ಬಂದಿರುವ ದೂರುಗಳನ್ನು ಎಎಸ್ ಸಿ ಐ ಪುರಸ್ಕರಿಸಿದೆ.  ಇನ್ನು ಪತಂಜಲಿ ಆಯುರ್ವೇದದ ದಂತ ಕಾಂತಿ ಟೂತ್ ಪೇಸ್ಟ್ ಸಹ ಜನರನ್ನು ದಾರಿ ತಪ್ಪಿಸುತ್ತಿದ್ದು, ಹಲ್ಲಿನ ಸೂಕ್ಶ್ಮತೆ, ವಸಡುಗಳಲ್ಲಿ ರಕ್ತ ಸ್ರಾವವನ್ನು ತಡೆಯುವುದು ಸೇರಿದಂತೆ ಹಲವು ವಿಷಯಗಳಲ್ಲಿ ಸಂಸ್ಥೆ ಹೇಳಿಕೊಂಡಿರುವ ರೀತಿಯಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ಎಎಸ್ ಸಿಐ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!