ಸಾಂದರ್ಭಿಕ ಚಿತ್ರ 
ವಾಣಿಜ್ಯ

ಬೆಂಗಳೂರಿನಲ್ಲಿ ೧೦೦೦೦ ಚದರಡಿಯ ಬೃಹತ್ ಮಳಿಗೆ ಪ್ರಾರಂಭಿಸಿದ ಬಾಟಾ

ಪಾದರಕ್ಷೆಗಳ ರೀಟೇಲ್ ಬ್ರ್ಯಾಂಡ್ ಬಾಟಾ ತನ್ನ ೧೧೦೧ನೇ ಮಳಿಗೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಇದು ದಕ್ಷಿಣ ಭಾರತದಲ್ಲೇ ಬಾಟಾದ ಅತಿ ದೊಡ್ಡ ಮಳಿಗೆ.

ಬೆಂಗಳೂರು: ಪಾದರಕ್ಷೆಗಳ ರೀಟೇಲ್ ಬ್ರ್ಯಾಂಡ್ ಬಾಟಾ ತನ್ನ ೧೧೦೧ನೇ ಮಳಿಗೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಇದು ದಕ್ಷಿಣ ಭಾರತದಲ್ಲೇ ಬಾಟಾದ ಅತಿ ದೊಡ್ಡ ಮಳಿಗೆ.

ಬ್ರಿಗೇಡ್ ರಸ್ತೆಯಲ್ಲಿ ಪ್ರಾರಂಭವಾದ ಈ ಮಳಿಗೆಯನ್ನು ಬುಧವಾರ ಬಾಲಿವುಡ್ ನಟಿ ಹುಮಾ ಖುರೇಶಿ, ಬಾಟಾ ಸಿಇಒ ಅಲೆಕ್ಸಿಸ್ ನಾಸರ್ದ್ ಮತ್ತು ಬಾಟಾ ದಕ್ಷಿಣ ಏಶಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಗೋಪಾಲಕೃಷ್ಣನ್ ಉದ್ಘಾಟಿಸಿದ್ದಾರೆ.

೧೦೦೦೦ ಚದರಡಿಯಲ್ಲಿ ಹರಡಿರುವ ಈ ಬೃಹತ್ ಮಳಿಗೆಯಲ್ಲಿ, ಒಂದೆ ಸೂರಿನೆಡೆ ೨೦೦೦ ವಿನ್ಯಾಸದ ಬಾಟಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಇತ್ತೀಚಿನ ವಿನ್ಯಾಸದ ಹಲವಾರು ಉತ್ಪನ್ನಗಳು ಈ ಮಳಿಗೆಯಲ್ಲಿ ಲಭ್ಯವಿವೆ.

"ಬಾಟಾದ ಈ ಬೃಹತ್ ಮಳಿಗೆ ಉದ್ಘಾಟನೆ ಮಾಡಲು ಬಹಳ ಸಂತಸವಾಗುತ್ತಿದೆ. ಬಾಟಾದ ಇತ್ತೀಚಿನ ವಿನ್ಯಾಸದ ಉತ್ಪನ್ನಗಳು ನನಗೆ ಆಪ್ತವೆನಿಸಿವೆ" ಎಂದು ನಟಿ ಹುಮಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT