ನವದೆಹಲಿ: ಕೇಂದ್ರ ಸರ್ಕಾರ ದೂರಸಂಪರ್ಕ ಆಪರೇಟರ್ ಗಳ ನಡುವಿನ ಏರ್‌ವೇವ್ಸ್ ಫ್ರೀಕ್ವೆನ್ಸಿಯ ವ್ಯಾಪಾರ ಮತ್ತು ಹಂಚಿಕೆಯ ನೀತಿಗಳನ್ನು ಉದಾರೀಕರಣಗೊಳಿಸಿದ ನಂತರ ಏರ್ ಟೆಲ್ ಸಂಸ್ಥೆ ವಿಡಿಯೋಕಾನ್ ನ ರೇಡಿಯೋ ಸ್ಪೆಕ್ಟ್ರಂ ನ್ನು ಖರೀದಿಸಲು ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತಿ ಏರ್ ಟೆಲ್ ಸಂಸ್ಥೆ ಆರು ವಲಯಗಳಲ್ಲಿ ವಿಡಿಯೋಕಾನ್ ಸಂಸ್ಥೆಯಿಂದ ರೇಡಿಯೋ ಸ್ಪೆಟ್ರಂ ನ್ನು ರೂ.4 ,428 ವೆಚ್ಚದಲ್ಲಿ ಖರೀದಿ ಮಾಡುವುದಾಗಿ ತಿಳಿಸಿದೆ. ರೇಡಿಯೋ ಸ್ಪೆಕ್ಟ್ರಂ ಖರೀದಿಗೆ ಸಂಬಂಧಿಸಿದಂತೆ ಏರ್ ಟೆಲ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.
ವಿಡಿಯೋ ಕಾನ್ ಟೆಲಿಕಮ್ಯುನಿಕೇಶನ್ಸ್ ಲಿಮಿಟೆಡ್ ನ 1,800 ಮೆಗಾ ಹರ್ಡ್ಸ್ ಬ್ಯಾಂಡ್ ವ್ಯಾಪ್ತಿಯ 2x5 ಮೆಗಾ ಹರ್ಡ್ಸ್ ಸ್ಪೆಕ್ಟ್ರಂ ನ್ನು ಏರ್ ಟೆಲ್ ಬಳಕೆ ಮಾಡಿಕೊಳ್ಳಲಿದೆ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ(ಪೂರ್ವ), ಉತ್ತರಪ್ರದೇಶ(ಪಶ್ಚಿಮ) ಹಾಗೂ ಗುಜರಾತ್ ನಲ್ಲಿ ಏರ್ ಟೆಲ್ ವಿಡಿಯೋಕಾನ್ ನ ಸ್ಪೆಕ್ಟ್ರಂ ನ್ನು 2032 ಡಿ.18 ವರೆಗೆ ಬಳಕೆ ಮಾಡಿಕೊಳ್ಳಲಿದೆ.
ಈ ಹಿಂದೆ ಏರ್ ಟೆಲ್ ಮಾದರಿಯಲ್ಲೇ ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆ ಸಹ ಜಿಯೋ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.