ಸೆನ್ಸೆಕ್ಸ್ (ಸಂಗ್ರಹ ಚಿತ್ರ) 
ವಾಣಿಜ್ಯ

3 ತಿಂಗಳ ಗರಿಷ್ಠ ಮಟ್ಟಕ್ಕೆ ರುಪಾಯಿ ಮೌಲ್ಯ; 66.85ಕ್ಕೆ ಏರಿಕೆ

ಸತತ ಕುಸಿತ ಕಾಣುವ ಮೂಲಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದ ರುಪಾಯಿ ಮೌಲ್ಯ ಗುರುವಾರ ಚೇತರಿಕೆ ಕಂಡಿದ್ದು, 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ...

ಮುಂಬೈ: ಸತತ ಕುಸಿತ ಕಾಣುವ ಮೂಲಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದ ರುಪಾಯಿ ಮೌಲ್ಯ ಗುರುವಾರ ಚೇತರಿಕೆ ಕಂಡಿದ್ದು, 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಈ ಹಿಂದಿನ ವಹಿವಾಟಿನಲ್ಲಿ 67 ರುಪಾಯಿಯ ಆಸುಪಾಸಿನಲ್ಲಿದ್ದ ರುಪಾಯಿ ಮೌಲ್ಯ ಇದೀಗ ಗುರುವಾರ ಒಂದೇ ದಿನ ಶೇ.0.5ರಷ್ಟು ಏರಿಕೆ ಕಾಣುವ ಮೂಲಕ ಡಾಲರ್ ಎದುರು 66.88ಕ್ಕೇ  ಏರಿಕೆಯಾಗಿದೆ.  ಈ ಹಿಂದಿನ ವಹಿವಾಟಿನಲ್ಲಿ ರುಪಾಯಿ ಮೌಲ್ಯ 67.24ಕ್ಕೆ ಸ್ಥಿರವಾಗಿತ್ತು.

184 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್
ಇನ್ನು ಭಾರತೀಯ ಷೇರುಮಾರುಕಟ್ಟೆ ಕೂಡ ಇಂದು ಅಲ್ಪ ಚೇತರಿಕೆಯಾಗಿದ್ದು, ಸೆನ್ಸೆಕ್ಸ್ 184 ಅಂಕಗಳ ಏರಿಕೆ ಕಂಡಿದೆ. ಬೆಳಗ್ಗೆ 11.45ರ ವೇಳೆಗೆ ಸೆನ್ಸೆಕ್ಸ್ ಶೇ.0.75ರಷ್ಟು ಏರಿಕೆ ಕಂಡು,  24,866.71 ಕ್ಕೆ ಏರಿಕೆಯಾಗಿದೆ. ಇನ್ನು ನಿಫ್ಟಿ ಕೂಡ 69.40 ಅಂಕಗಳ ಏರಿಕೆಯೊಂದಿಗೆ ತನ್ನ ಅಂಕಗಳನ್ನು 7,568.15ಕ್ಕೆ ಹೆಚ್ಚಳ ಮಾಡಿಕೊಂಡಿದೆ. ಪ್ರಮುಖವಾಗಿ ಇಂಧನ ವಲಯಕ್ಕೆ ಹೆಚ್ಚಾಗಿ  ಲಾಭ ಕಂಡುಬಂದಿದ್ದು, ಪೆಟ್ರೋಲ್ ಮತ್ತು ಗ್ಯಾಸ್ ಸಂಸ್ಥೆಗಳ ಷೇರುಗಳು ಹೆಚ್ಚಿನ ಲಾಭ ಗಳಿಸಿವೆ.

ಉಳಿದಂತೆ ಔಷಧ ವಲಯಕ್ಕೆ ನಷ್ಟವಾಗಿದ್ದು, 344 ಔಷಧಿಗಳ ಮಾರಾಟದ ಮೇಲೆ ನಿಷೇಧ ಹೇರಿದ ಸರ್ಕಾರದ ಕ್ರಮ ಷೇರುಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ ಎಂದು  ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ