ವಾಣಿಜ್ಯ

ಭಾರತದ ಅಭಿವೃದ್ಧಿ ದರ ಇಳಿಕೆ ಸಾಧ್ಯತೆ: ಎಡಿಬಿ

Rashmi Kasaragodu
ನವದೆಹಲಿ:  2016-17 ಆರ್ಥಿಕ ವರ್ಷದಲ್ಲಿ ದೇಶದ ಅಭಿವೃದ್ದಿ ದರ ಶೇ. 7.4 ಆಗಿ ಇಳಿಕೆಯಾಗಲಿದೆ ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಹೇಳಿದೆ. 
ಅದೇ ವೇಳೆ ಹೊಸ ಆರ್ಥಿಕ ನೀತಿಗಳು ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ ಎಂದು ಎಡಿಬಿ ಅಭಿಪ್ರಾಯ ವ್ಯಕ್ತ ಪಡಿಸಿದೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಭಾರತ ಶೇ. 7.6 ರಷ್ಟು ಅಭಿವೃದ್ಧಿಯನ್ನು ಸಾಧಿಸಲಿದೆ ಎಂದು ಎಡಿಬಿ ಹೇಳಿದೆ. ಕಳೆದ ವರ್ಷ ಭಾರತದ ಅಭಿವೃದ್ಧಿ ದರ ಶೇ. 7.8 ಆಗಿತ್ತು. 
ಸರ್ಕಾರಿ ನೌಕರರ ಸಂಬಳ ಪರಿಷ್ಕರಣೆ ಮತ್ತು ತೈಲ ಬೆಲೆ ಏರಿಕೆ ಮೊದಲಾದವುಗಳಿಂದ ಹಣದುಬ್ಬರ ಏರಿಕೆಯಾಗುವ ಸಾಧ್ಯತೆಯಿದೆ. 
ಏತನ್ಮಧ್ಯೆ, ಮುಂದಿನ ಆರ್ಥಿಕ ವರ್ಷದಲ್ಲಿ ಭಾರತ ಶೇ.7 ರಿಂದ ಶೇ.7.75 ರಷ್ಟು ಅಭಿವೃದ್ಧಿ ದರವನ್ನು ಹೊಂದುವ ಸಾಧ್ಯತೆಯಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಹೇಳಿದೆ.
SCROLL FOR NEXT