ವಾಣಿಜ್ಯ

ಅಮೆರಿಕದ ಜನರು ಭಾರತದ ಫೋನ್ ಬಳಸುವಂತಾಗಬೇಕು: ಸಚಿನ್ ತೆಂಡೂಲ್ಕರ್

Rashmi Kasaragodu
ನವದೆಹಲಿ: ಭಾರತೀಯರು ತಯಾರಿಸಿದ ಫೋನ್‌ಗಳನ್ನು ಅಮೆರಿಕದ ಜನರು ಬಳಸುವ ಕಾಲ ಬರಬೇಕು ಎಂಬುದು ನನ್ನ ಕನಸು. ಭಾರತದ ಕಂಪನಿಗಳು ಜಗತ್ತೇ ಮೆಚ್ಚುವಂಥ ಫೋನ್‌ಗಳನ್ನು ತಯಾರಿಸಬೇಕು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. 
ಸ್ಮಾರ್ಟೋನ್ ಕಂಪನಿಯ ಸ್ಮಾರ್ಟ್ ಫೋನ್ ಮತ್ತು ಟು ಇನ್ ಒನ್ ನೋಟ್‌ಬುಕ್‌ನ್ನು ಬಿಡುಗಡೆ ಮಾಡಿದ ಸಚಿನ್, ಇದು ನನ್ನ ಎರಡನೇ ಇನ್ನಿಂಗ್ಸ್. ಮೊದಲು ನಾನು ಮೈದಾನದಲ್ಲಿ ಕ್ರಿಕೆಟ್ ಆಡುತಿದ್ದೆ. ಈಗ ನಾನು ಸ್ವಉದ್ಯೋಗದಲ್ಲಿ ಪಾಲುದಾರನಾಗಿದ್ದೇನೆ. ಅಂದರೆ ನೀವು ಈ ಉತನ್ನಗಳ ಹಿಂದೆ ಬರೆದಿರುವುದನ್ನು ನೋಡಿ. ಅದರಲ್ಲಿ ಭಾರತದಲ್ಲೇ ವಿನ್ಯಾಸ ಮತ್ತು ನಿರ್ಮಾಣ ಮಾಡಲಾಗಿರುವ ಉತ್ಪನ್ನ ಎಂದು ಬರೆಯಲಾಗಿದೆ. ಇಂಥಾ ಉತ್ಪನ್ನವೊಂದರ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿರುವುದಕ್ಕೆ ಖುಷಿಯಾಗುತ್ತಿದೆ ಎಂದಿದ್ದಾರೆ.
ಸ್ಮಾರ್ಟೋನ್ ಕಂಪನಿಯಲ್ಲಿ ಸಚಿನ್ ಹೂಡಿಕೆ ಮಾಡಿದ್ದು, ಪ್ರಸ್ತುತ ಕಂಪನಿಯ ರಾಯಭಾರಿಯಾಗಲಿದ್ದಾರೆ. 
ಆದಾಗ್ಯೂ, ಸಚಿನ್ ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿಲ್ಲ.
ಭಾರತದ ಕಂಪನಿಯೊಂದು ಜಾಗತಿಕ ಮಟ್ಟಕ್ಕೇರುತ್ತಿದೆ ಎಂದರೆ ಅದು ಖುಷಿಯ ವಿಚಾರ. ಅದನ್ನು ನಾನು ಹೃತ್ಪೂರ್ವಕ ಸ್ವಾಗತಿಸಿ ಅದನ್ನು ನಾನು ಬೆಂಬಲಿಸುತ್ತೇನೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೇಳಿದ್ದಾರೆ.
SCROLL FOR NEXT