ವಾಣಿಜ್ಯ

ಈ ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇಕಡಾ 7.9ಕ್ಕೆ ಏರಿಕೆ

Sumana Upadhyaya

ನವದೆಹಲಿ: 2015-16ನೇ ಸಾಲಿನ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಭಾರತ ದೇಶದ ಆರ್ಥಿಕತೆ ಶೇಕಡಾ 7.9ಕ್ಕೆ ಏರಿಕೆಯಾಗಿದ್ದು, ಕಳೆದ ಐದು ವರ್ಷಗಳಲ್ಲಿ ಏರಿಕೆಯಾದ ಒಟ್ಟಾರೆ ಬೆಳವಣಿಗೆ ದರ ಇದಾಗಿದೆ. ಕೃಷಿ ಕ್ಷೇತ್ರ ಮತ್ತು ಉತ್ಪಾದನೆ ವಲಯಗಳಲ್ಲಿನ ಬೆಳವಣಿಗೆಯಿಂದ ಆರ್ಥಿಕ ಬೆಳವಣಿಗೆಯಾಗಿದೆ.

ಕೇಂದ್ರ ಅಂಕಿಅಂಶ ಕಾರ್ಯಾಲಯ(ಸಿಎಸ್ಒ) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ಈ ವಿಷಯ ತಿಳಿದುಬಂದಿದ್ದು, ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಉತ್ಪಾದನೆ ಕ್ಷೇತ್ರದಲ್ಲಿ ಶೇಕಡಾ 9.3ರಷ್ಟು ಪ್ರಗತಿ ಕಂಡುಬಂದಿದ್ದು, ಕೃಷಿ ಕ್ಷೇತ್ರದಲ್ಲಿ ಶೇಕಡಾ 2.3ರಷ್ಟು ಏರಿಕೆಯಾಗಿದೆ.

ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆಯಲ್ಲಿ ವಿದ್ಯುತ್, ನೀರು ಪೂರೈಕೆ, ಹೊಟೇಲ್, ಸಾರಿಗೆ ಹೀಗೆ ನಾನಾ ಕ್ಷೇತ್ರಗಳಲ್ಲಿ ಎಷ್ಟು ಬೆಳವಣಿಗೆಯಾಗಿದೆ ಎಂಬುದು ಸಿಎಸ್ ಒ ವರದಿಯಲ್ಲಿ ತಿಳಿಸಿದೆ.

SCROLL FOR NEXT