ಸಾಂದರ್ಭಿಕ ಚಿತ್ರ 
ವಾಣಿಜ್ಯ

ಸೇವಾ ತೆರಿಗೆ ಹೆಚ್ಚಳ; ಇಂದಿನಿಂದ ಈ ವಸ್ತುಗಳು-ಸೇವೆಗಳು ತುಟ್ಟಿ; ನಿಮಗೆ ತಿಳಿದಿರಲಿ

ಬಜೆಟ್ ನಲ್ಲಿ ಘೋಷಿಸಲಾಗಿದ್ದ ಸೇವಾ ತೆರಿಗೆಯಲ್ಲಿನ ಬದಲಾವಣೆಗಳು ಜೂನ್ ೧ ರಿಂದ ಜಾರಿಗೆ ಬರಲಿದ್ದು ಕಾರ್ ಗಳು, ಸಿಗರೆಟ್ ಗಳು, ಬ್ರಾಂಡೆಡ್ ಉಡುಪುಗಳು, ವಿಮಾನಯಾನ ಇತ್ಯಾದಿ

ನವದೆಹಲಿ: ಬಜೆಟ್ ನಲ್ಲಿ ಘೋಷಿಸಲಾಗಿದ್ದ ಸೇವಾ ತೆರಿಗೆಯಲ್ಲಿನ ಬದಲಾವಣೆಗಳು ಜೂನ್ ೧ ರಿಂದ ಜಾರಿಗೆ ಬರಲಿದ್ದು ಕಾರ್ ಗಳು, ಸಿಗರೆಟ್ ಗಳು, ಬ್ರಾಂಡೆಡ್ ಉಡುಪುಗಳು, ವಿಮಾನಯಾನ ಇತ್ಯಾದಿ ತುಟ್ಟಿಯಾಗಲಿವೆ.

ಸೇವಾ ತೆರಿಗೆಯಲ್ಲಿ ಹೆಚ್ಚುವರಿ ಕೃಷಿ ಕಲ್ಯಾಣ ಸೆಸ್ ೦.೫% ಸೇರಿದ್ದು, ಇನ್ನುಮುಂದೆ ಸೇವಾತೆರಿಗೆ ೧೫%ಗೆ ಹೆಚ್ಚಳಗೊಂಡಿದ್ದು, ನಿಮ್ಮ ದೂರವಾಣಿ ಬಿಲ್, ರೈಲು-ವಿಮಾನ ಪ್ರಯಾಣ, ಹೋಟೆಲ್ ಬಿಲ್ ಇವೆಲ್ಲವೂ ನಿಮ್ಮ ಪರ್ಸ್ ಗೆ ಹೊರೆಯಾಗಲಿವೆ.

ಅಲ್ಲದೆ ಹಿಂದಿನ ಸರ್ಕಾರಗಳನ್ನು ಅನುಕರಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಎಲ್ಲ ಹೊಗೆಸೊಪ್ಪಿನ ಉತ್ಪನ್ನಗಳ ಮೇಲೆ ೧೫% ಅಬಕಾರಿ ತೆರಿಗೆಯನ್ನು ಹೇರಿದ್ದಾರೆ.

ಜೂನ್ ೧ ರಿಂದ ತುಟ್ಟಿಯಾಗಲಿರುವ ಕೆಲವು ಉತ್ಪನ್ನಗಳ-ಸೇವೆಗಳ ಪಟ್ಟಿ ಇಂತಿದೆ.

೧. ಸಿಗರೆಟ್ ಗಳು
೨. ಸಿಗಾರ್
೩. ಹೊಗೆಸೊಪ್ಪು ಉತ್ಪನ್ನಗಳು
೪. ಕಾರ್
೫. ಹೋಟೆಲ್ ಊಟ, ರೈಲು-ವಿಮಾನ ಪ್ರಯಾಣ, ಎಲ್ಲ ಬಿಲ್ ಗಳು
೬. ಸಿದ್ಧಪಡಿಸಿದ ಉಡುಪುಗಳು ಮತ್ತು ಬ್ರಾಂಡೆಂಡ್ ಉತ್ಪನ್ನಗಳು
೭. ಚಿನ್ನ, ಬೆಳ್ಳಿ; ಬೆಳ್ಳಿಯನ್ನು ಹೊರತುಪಡಿಸಿದ ಆಭರಣಗಳು
೮. ಖನಿಜಾಂಶ ನೀರು, ಇತರೆ ಸಕ್ಕರೆ ದ್ರವ್ಯಗಳು
೯. ೨ ಲಕ್ಷಕ್ಕೂ ಹೆಚ್ಚಿನ ನಗದು ವ್ಯವಹಾರದ ಸೇವೆಗಳು ಮತ್ತು ದಾಸ್ತಾನು
೧೦. ಪ್ಲಾಸ್ಟಿಕ್ ಚೀಲಗಳು
೧೧. ಆಮದುಗೊಂಡ ನಕಲಿ ಆಭರಣಗಳು
೧೨. ಸೌರಶಕ್ತಿ ನೀರು ಕಾಯಿಸುವ ಯಂತ್ರ
೧೩. ಕಾನೂನು ಸೇವೆ
೧೪. ಲಾಟರಿ ಟಿಕೆಟ್ ಗಳು
೧೫. ಸಾಗಾಣೆ ಮಾಡುವ ಸೇವೆ
೧೬. ಇ-ರೀಡಿಂಗ್ ಉಪಕರಣಗಳು
೧೭. ಗಾಲ್ಫ್ ಕಾರ್ ಗಳು
೧೮. ಚಿನ್ನದ ಗಟ್ಟಿಗಳು ಇತ್ಯಾದಿ.,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT