ಸಿಯೋಲ್: ಗ್ಯಾಲೆಕ್ಸಿ ನೋಟ್ ೭ ಸ್ಮಾರ್ಟ್ ಫೋನ್ ಗಳು ಸ್ಫೋಟಿಸುತ್ತಿರುವ ಹಿನ್ನಲೆಯಲ್ಲಿ ಆ ಮಾದರಿಯ ೨.೮ ದಶಲಕ್ಷ ಫೋನುಗಳನ್ನು ಹಿಂಪಡೆದು ಹಲವು ತೊಂದರೆಗಳನ್ನು ಅನುಭವಿಸುತ್ತಿರುವ ದಕ್ಷಿಣ ಕೊರಿಯಾದ ತಂತ್ರಜ್ಞಾನ ದೈತ್ಯ ಸ್ಯಾಮಸಂಗ್ ಮುಂದಿನ ವರ್ಷ ಮಡಚಬಲ್ಲ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
"ಗ್ಯಾಲಕ್ಸಿ ಎಕ್ಸ್ ಎಂದು ಈ ಮಡಚಬ ಮಾದರಿಯನ್ನು ಹೆಸರಿಸಲಾಗಿದೆ" ಎಂದು ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.
ಈ ಮಧ್ಯೆ ಈ ಸಂಸ್ಥೆಯ ವಾಷಿಂಗ್ ಮೆಷಿನ್ ಗಳು ಸ್ಫೋಟಗೊಳ್ಳುತ್ತಿರುವ ಸುದ್ದಿಗಳು ಕೂಡ ಬರುತ್ತಿವೆ. ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾ ಅಧಿಕಾರಿಗಳು ಭ್ರಷ್ಟಾಚಾರದ ಆರೋಪದ ಮೇಲೆ ಸ್ಯಾಮಸಂಗ್ ಕಚೇರಿಯ ಮೇಲೆ ದಾಳಿ ಮಾಡಿದ್ದನ್ನು ಕೂಡ ನೆನಪಿಸಿಕೊಳ್ಳಬಹುದು.
ಈಗ ೨೦೧೭ ರ ಹೊತ್ತಿಗೆ ಮಡಚಬಲ್ಲ ಸ್ಮಾರ್ಟ್ ಫೋನ್ ಗಳನ್ನು ಸ್ಯಾಮಸಂಗ್ ಸಂಸ್ಥೆ ಮುಂದಾಗಿರುವುದು ಹಲವು ತಂತ್ರಜ್ಞಾನ ಪಂಡಿತರ ಕುತೂಹಲ ಕೆರಳಿಸಿದೆ.