ನವದೆಹಲಿ: ಬ್ಯಾಂಕ್ ಲಾಕರ್ ಗಳ ಮೇಲೆ ಕೇಂದ್ರ ಸರ್ಕಾರ 2 ಹಂತದ ಸೀಮಿತ ದಾಳಿಯನ್ನು ನಡೆಸಲಿದೆ ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಬ್ಯಾಂಕ್ ಲಾಕರ್ ಗಳನ್ನು ಸೀಲ್ ಮಾಡುವ ಅಥವಾ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಹಣಕಾಸು ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ.
ದುಬಾರಿ ನೋಟಿನ ಮೇಲೆ ನಿಷೇಧ ಹೇರಿದ ಬಳಿಕ ಇದೀಗ ಕೇಂದ್ರ ಸರ್ಕಾರದ ಕಣ್ಣು ಬ್ಯಾಂಕ್ ಲಾಕರ್ ಗಳ ಮೇಲೆ ಬಿದ್ದಿದ್ದು, ಚಿನ್ನಾಭರಣಗಳು ಹಾಗೂ ವಜ್ರಗಳನ್ನು ವಶಕ್ಕೆ ಪಡೆಯಲಿದೆ ಎಂಬ ಸುದ್ದಿಗಳು ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವಾಲಯವು, ಲಾಕರ್ ಗಳನ್ನು ಸರ್ಕಾರ ಸೀಸ್ ಮಾಡಲಿದೆ ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವರದಿಯೊಂದು ಆಧಾರ ರಹಿತವಾಗಿದ್ದು, ಬ್ಯಾಂಕ್ ಲಾಕರ್ ಗಳನ್ನು ಸೀಸ್ ಮಾಡುವ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ತಿಳಿಸಿದೆ.