ಸಾಂದರ್ಭಿಕ ಚಿತ್ರ 
ವಾಣಿಜ್ಯ

10 ರೂಪಾಯಿ ನಕಲಿ ನಾಣ್ಯ ಚಲಾವಣೆಯ ವದಂತಿ ತಳ್ಳಿ ಹಾಕಿದ ರಿಸರ್ವ್ ಬ್ಯಾಂಕ್

10 ರೂಪಾಯಿ ನಕಲಿ ನಾಣ್ಯ ಚಲಾವಣೆಯಲ್ಲಿದೆ ಎಂಬ ವದಂತಿಯನ್ನು ಅಲ್ಲಗಳೆದಿರುವ ರಿಸರ್ವ್ ಬ್ಯಾಂಕ್, ಇಂತಹ...

ಮುಂಬೈ: 10 ರೂಪಾಯಿ ನಕಲಿ ನಾಣ್ಯ ಚಲಾವಣೆಯಲ್ಲಿದೆ ಎಂಬ ವದಂತಿಯನ್ನು ಅಲ್ಲಗಳೆದಿರುವ ರಿಸರ್ವ್ ಬ್ಯಾಂಕ್, ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಮತ್ತು ಯಾವುದೇ ಹಿಂಜರಿಕೆಯಿಲ್ಲದೆ 10 ರೂಪಾಯಿ ನಾಣ್ಯವನ್ನು ವಹಿವಾಟುಗಳಿಗೆ ಸಾರ್ವಜನಿಕರು ಬಳಸಿಕೊಳ್ಳಬಹುದು ಎಂದು ಹೇಳಿದೆ.
ಕೆಲವು ಮಾಹಿತಿಯಿಲ್ಲದ ಜನರು ನಾಣ್ಯಗಳ ನಿಖರತೆಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವುದರಿಂದ ವ್ಯಾಪಾರಿಗಳು, ಅಂಗಡಿ ಮಾಲಿಕರು ಮತ್ತು ಸಾಮಾನ್ಯ ಜನತೆಯ ಮನಸ್ಸಿನಲ್ಲಿ ಸಂಶಯ ಮೂಡುತ್ತಿದೆ. ಹಾಗಾಗಿ ಅನವಶ್ಯಕ ಗೊಂದಲವುಂಟಾಗುತ್ತಿದೆ ಎಂದು ಆರ್ ಬಿಐ ಹೇಳಿಕೆಯಲ್ಲಿ ತಿಳಿಸಿದೆ.
10ರೂಪಾಯಿ ನಾಣ್ಯ ನಕಲಿಯಲ್ಲ ಮತ್ತು ಅದು ರದ್ದಾಗಿಲ್ಲ, ಸಾರ್ವಜನಿಕರು ತಮ್ಮ ವಹಿವಾಟುಗಳಿಗೆ ಯಾವುದೇ ಹಿಂಜರಿಕೆಯಿಲ್ಲದೆ ಬಳಸಿಕೊಳ್ಳಬಹುದು ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ನಾಣ್ಯಗಳು ದೀರ್ಘಾವಧಿಯವರೆಗೆ ಚಲಾವಣೆಯಲ್ಲಿರುವುದರಿಂದ ವಿವಿಧ ವಿನ್ಯಾಸದ ಮತ್ತು ವಿವಿಧ ಆಕಾರದ ನಾಣ್ಯಗಳು ಒಂದೇ ಸಮಯಕ್ಕೆ ಚಲಾವಣೆಗೆ ಬರುವ ಸಾಧ್ಯತೆಯಿದೆ. 
2011ರಲ್ಲಿ 10 ರೂಪಾಯಿ ಗುರುತನ್ನು ಜಾರಿಗೆ ತಂದಿದ್ದು ಅಂತಹ ಬದಲಾವಣೆಗಳಲ್ಲೊಂದು. ಆಗ ರೂಪಾಯಿ ಗುರುತು ಇರುವುದು ಮತ್ತು ಇಲ್ಲದಿರುವುದು ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತಿರುತ್ತದೆ. ಆದರೆ ಎರಡೂ ಕೂಡ ಸಕ್ರಮ ನಾಣ್ಯಗಳೇ. ಭಾರತ ಸರ್ಕಾರ ಹೊರಡಿಸುವ ವಿಶೇಷ ಲಕ್ಷಣಗಳನ್ನು ಹೊಂದಿರುವ ಹೊಸ ಮುಖಬೆಲೆಯ ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಪರಿಚಯಿಸುವ ಹೊಸ ಮುಖಬೆಲೆಯ ನಾಣ್ಯಗಳನ್ನು ಆರ್ ಬಿಐ ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಿರುತ್ತದೆ ಎಂದು ಕೂಡ ಅದು ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT