ವಾಣಿಜ್ಯ

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರುಪಾಯಿ ಮೌಲ್ಯ

Lingaraj Badiger
ನವದೆಹಲಿ: ಆರ್‌ಬಿಐ ಮಧ್ಯಪ್ರವೇಶದ ನಡುವೆಯೂ ದೇಶದಲ್ಲಿ 500 ಹಾಗೂ 1000 ನೋಟ್ ನಿಷೇಧಿಸಿದ ನಂತರ ಬಲಿಷ್ಠ ಅಮೆರಿಕನ್‌ ಡಾಲರ್‌ ಎದುರು ಗುರುವಾರ ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತಿ ಡಾಲರ್ ಗೆ 68.86 ರು.ಗಳಿಗೆ ಇಳಿದಿದೆ.
ಅಮೆರಿಕನ್‌ ಡಾಲರ್‌ ಬಲಿಷ್ಠಗೊಂಡಿರುವ ಪ್ರಯುಕ್ತ ಭಾರತ ಸಹಿತ ಉದಯೋನ್ಮುಖ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳದ ಹೊರ ಹರಿವು ನಿರಂತರವಾಗಿ ಸಾಗಿದ್ದು ರುಪಾಯಿ ಕುಸಿತಕ್ಕೆ ಕಾರಣವಾಗಿದೆ.
2013ರ ಆಗಸ್ಟ್‌ನಲ್ಲಿ ಡಾಲರ್‌ ಎದುರು ರೂಪಾಯಿ 68.85 ರು. ಮಟ್ಟಕ್ಕೆ ಕುಸಿದದ್ದು ಈ ಹಿಂದಿನ ದಾಖಲೆ ತಳಮಟ್ಟವಾಗಿತ್ತು. ಇಂದು ವಿದೇಶಿ ವಿನಿಮಯ ವಹಿವಾಟಿನ ನಡುವೆ ಡಾಲರ್‌ ಎದುರು ರೂಪಾಯಿ 68.86 ರೂ. ಮಟ್ಟಕ್ಕೆ ಕುಸಿದು ಸಾರ್ವಕಾಲಿಕ ದಾಖಲೆಯ ತಳಮಟ್ಟವನ್ನು ತಲುಪಿತು. 
SCROLL FOR NEXT