ವಾಣಿಜ್ಯ

ಎಸ್ ಬಿಐ, ಐಸಿಐಸಿಐ ಬ್ಯಾಂಕ್ ನಿಂದ ಸಾಲದ ಬಡ್ಡಿದರ ಕಡಿತ!

Srinivasamurthy VN

ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ದೇಶದ ಪ್ರಮುಖ ಬ್ಯಾಂಕುಗಳಾದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹಾಗೂ ಐಸಿಐಸಿಐ ಬ್ಯಾಂಕುಗಳ ತಮ್ಮ ಸಾಲದ ಮೇಲಿನ ಬಡ್ಡಿದರವನ್ನು  ಕಡಿತಗೊಳಿಸಿವೆ.

ಈ ಬಗ್ಗೆ ಶನಿವಾರವೇ ಈ ಬ್ಯಾಂಕುಗಳ ನಿರ್ವಹಣಾ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಐಸಿಐಸಿಐ ಬ್ಯಾಂಕ್ ತನ್ನ ಬಡ್ಡಿದರದಲ್ಲಿ 0.10ರಷ್ಟು ಬಡ್ಡಿದರ ಕಡಿತಗೊಳಿಸಿದ್ದರೆ, ಎಸ್ ಬಿಐ 0.15ರಷ್ಟು  ಬಡ್ಡಿದರ ಕಡಿತಗೊಳಿಸಿದೆ. ಐಸಿಐಸಿಐ ಬ್ಯಾಂಕ್ ನಿಂದ ಪ್ರಕಟಣೆ ಹೊರ ಬಿದ್ದ ಕೆಲವೇ ಗಂಟೆಗಳ ಅವಧಿಯಲ್ಲಿ ಎಸ್ ಬಿಐ ಕೂಡ ತನ್ನ ಬಡ್ಡಿದರ ಕಡಿತ ಸುದ್ದಿಯನ್ನು ಪ್ರಕಟಿಸಿದೆ. ಇನ್ನು  ವರ್ಷಾಂತ್ಯದ ವಹಿವಾಟನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿವೆ ಎಂದು ಹೇಳಲಾಗತ್ತಿದೆ.

ಅಂತೆಯೇ ಇದೇ ಹಿನ್ನಲೆಯಲ್ಲಿ ದೇಶದ ಇತರೆ ಪ್ರಮುಖ ರಾಷ್ಟ್ರೀಯ ಹಾಗೂ ಖಾಸಗಿ ಬ್ಯಾಂಕುಗಳ ಕೂಡ ತಮ್ಮ ಬಡ್ಡಿ ದರವನ್ನು ಕಡಿತಗೊಳಿಸಿ ಗ್ರಾಹಕರನ್ನು ಸೆಳೆಯುವ ಕಾರ್ಯಕ್ಕೆ  ಮುಂದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

2015 ಜನವರಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಕಡಿತ ಮಾಡಿದ ಬಳಿಕ ವಿವಿಧ ಬ್ಯಾಂಕುಗಳು ತಮ್ಮ ತಮ್ಮ ಬಡ್ಡಿದರ ಕಡಿತಗೊಳಿಸಿದ್ದವು. ಇದಾದ ಸುಮಾರು 20 ತಿಂಗಳ ಬಳಿಕ  ಬ್ಯಾಂಕುಗಳ ಇದೇ ಮೊದಲ ಬಾರಿಗೆ ಸಾಲದ ಬಡ್ಡಿದರವನ್ನು ಕಡಿತಗೊಳಿಸಿವೆ.

SCROLL FOR NEXT