ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಸುಮಾರು 1,000 ಶೆಲ್ ಕಂಪೆನಿಗಳು 1.37 ಲಕ್ಷ ರೂಪಾಯಿ ತೆರಿಗೆಯನ್ನು ಪಾವತಿಸದೆ ತಪ್ಪಿಸಿಕೊಂಡಿದ್ದು ಸುಮಾರು 13,300 ಕೋಟಿ ರೂಪಾಯಿ ನಕಲಿ ವ್ಯವಹಾರ ನಡೆಸಿದೆ ಎಂದು ಆದಾಯ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ 22,000 ಫಲಾನುಭವಿಗಳನ್ನು 1,155 ಕಂಪೆನಿಗಳು ಬಳಸಿಕೊಂಡಿವೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ನಿನ್ನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಆದಾಯ ಇಲಾಖೆ 23,064 ಶೋಧಗಳನ್ನು ನಡೆಸಿದ್ದು ಅವುಗಳಲ್ಲಿ 17,525 ಶೋಧಗಳು ತೆರಿಗೆ ಇಲಾಖೆಗಳದ್ದಾಗಿವೆ ಮತ್ತು ಉಳಿದವನ್ನು ಅಬಕಾರಿ, ಸುಂಕ ಮತ್ತು ಸೇವಾ ತೆರಿಗೆ ವಿಭಾಗ ನಡೆಸಿದೆ.
ತೆರಿಗೆ ಪಾವತಿಸದ 1.37 ಲಕ್ಷ ಕೋಟಿ ರೂಪಾಯಿಗಳಲ್ಲಿ 69,434 ಕೋಟಿ ಆದಾಯ ತೆರಿಗೆ, 11,405 ಕೋಟಿ ಸುಂಕ, 13,952 ಕೋಟಿ ಕೇಂದ್ರ ಅಬಕಾರಿ, 42,727 ಕೋಟಿ ರೂಪಾಯಿ ಸೇವಾ ತೆರಿಗೆಗಳಾಗಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಆದಾಯ ತೆರಿಗೆ ಇಲಾಖೆಯಡಿ ಕಾನೂನು ನಿರ್ದೇಶನಾಲಯ ಸಂಸ್ಥೆಯ ಸಂಘಟಿತ ಮತ್ತು ಐಕ್ಯ ಕ್ರಮಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಕಪ್ಪು ಹಣದ ವಿರುದ್ಧ ಹೋರಾಟ ನಡೆಸಲಾಯಿತು. ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಯಡಿ ಅಭೂತಪೂರ್ವ ಜಾರಿ ಕ್ರಮಗಳನ್ನು ನೋಡಬಹುದಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಕಪ್ಪು ಹಣವನ್ನು ಗುರುತಿಸುವ ಕಾರ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಗಲಿದೆ. ತೆರಿಗೆ ಪಾವತಿಸದೆ ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ.
ಕಳೆದ ಮೂರು ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ಸಾಗಣೆ ವಿರುದ್ಧ 519 ಕೇಸುಗಳನ್ನು ದಾಖಲಿಸಿದ್ದು 396 ಶೋಧಗಳನ್ನು ನಡೆಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos