ವಾಣಿಜ್ಯ

ಪ್ರತಿ ದಿನವೂ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಗೆ ಕೇಂದ್ರಕ್ಕೆ ಒಎಂಸಿ ಪ್ರಸ್ತಾವನೆ

Srinivas Rao BV
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯ ದರವನ್ನಾಧರಿಸಿ ಪ್ರತಿ ದಿನವೂ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಗೆ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ನೀಡಿವೆ. 
ಪ್ರತಿ ದಿನ ತೈಲ ದರ ಪರಿಷ್ಕರಣೆ ಮಾಡುವುದು ಕೇವಲ ಪ್ರಸ್ತಾವನೆಯಷ್ಟೇ ಆಗಿದ್ದು, ಈ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಸಂಸ್ಥೆಗಳು ಭಾರತದಲ್ಲಿ ಶೇ.90 ರಷ್ಟು ಮಾರುಕಟ್ಟೆಯನ್ನು ವ್ಯಾಪಿಸಿದೆ. ಪ್ರಸ್ತುತ 15 ದಿನಗಳಿಗೆ ಒಮ್ಮೆ ಪರಿಷ್ಕರಣೆಯಾಗುತ್ತಿದೆ. 
15 ದಿನಗಳಿಗೆ ಒಮ್ಮೆ ತೈಲ ದರ ಪರಿಷ್ಕರಣೆಯಾಗುತ್ತಿರುವುದರಿಂದ ತೈಲ ಮಾರುಕಟ್ಟೆ ಸಂಸ್ಥೆಗಳಿಗೆ ನಷ್ಟ ಉಂಟಾಗುತ್ತಿದ್ದು, ಒಂದೊಮ್ಮೆ ಪ್ರತಿ ದಿನವೂ ತೈಲ ದರ ಪರಿಷ್ಕರಣೆಯಾದಲ್ಲಿ ಪೆಟ್ರೋಲಿಯಂ ಸಂಸ್ಥೆಗಳಿಗೆ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
SCROLL FOR NEXT