ನವದೆಹಲಿ: ಸಮ್ಮರ್ ಆಫರ್ ಗೆ ಟ್ರಾಯ್ ನಿಂದ ಕತ್ತರಿ ಬೀಳುತ್ತಿದ್ದಂತೆಯೇ ರಿಲಯನ್ಸ್ ಜಿಯೋ ಸಂಸ್ಥೆ ಹೊಸ ಆಫರ್ ಘೋಷಣೆ ಮಾಡುತ್ತಿದ್ದು, ಕೇವಲ 309 ರು.ಗಳಿಗೆ ನಿತ್ಯ 1 ಜಿಬಿ ಡಾಟಾ ಮತ್ತು ಅನಿಯಮಿತ ಕರೆಗಳ ಆಫರ್ ವೊಂದನ್ನು ಘೋಷಣೆ ಮಾಡಲು ಹೊರಟಿದೆ,
ಮೂಲಗಳ ಪ್ರಕಾರ ರಿಲಯನ್ಸ್ ಜಿಯೋ ಸಂಸ್ಥೆ ಅಧಿಕೃತವಾಗಿ ಈ ಆಫರ್ ಅನ್ನು ಘೋಷಣೆ ಮಾಡಿಲ್ಲವಾದರೂ, ಶೀಘ್ರದಲ್ಲೇ ಈ ಹೊಸ ಆಫರ್ ಅನ್ನು ಗ್ರಾಹರಿಗೆ ಪರಿಚಯಿಸಲು ನಿರ್ಧರಿಸಿದೆ, ಅದರಂತೆ ಈಗಾಗಲೇ ಜಿಯೋ ಪ್ರೈಮ್ ಮೆಂಬರ್ ಷಿಪ್ ಹೊಂದುರ ಗ್ರಾಹಕರು ಕೇವಲ 309 ರು.ಗಳನ್ನು ಪಾವತಿಸಿದರೆ ಪ್ರತಿನಿತ್ಯ 1 ಜಿಬಿ ಡಾಟಾ ಹಾಗೂ ಅನಿಯಮಿತ ಎಸ್ ಟಿಡಿಸ ಲೋಕಲ್ ಮತ್ತು ರೋಮಿಂಗ್ ಕಾಲ್ ಗಳನ್ನು ನೀಡಲಿದೆ. ಇದರ ಅವಧಿ 84 ದಿನಗಳಾಗಿರಲಿದೆ.
ಅಂತೆಯೇ ಜಿಯೋ ಪ್ರೈಮ್ ಸದಸ್ಯತ್ವ ಹೊಂದಿರದ ಗ್ರಾಹಕರು 349 ರುಗಳನ್ನು ಪಾವತಿ ಮಾಡಿದರೆ ಮೇಲಿನ ಆಫರ್ ಪಡೆಯಬಹುದಾಗಿದೆ. ಇನ್ನು ಜಿಯೋ ಹೊಸ ಗ್ರಾಹಕರು ಒಟ್ಟು 408 ರುಗಳನ್ನು ಪಾವತಿ ಮಾಡಿದರೆ (99 ಸದಸ್ಯತ್ವ ಮತ್ತು 309 ರೀಚಾರ್ಚ್) ಅನಿಯಮಿತ ಕರೆ ಸೌಲಭ್ಯ ಹಾಗೂ 84 ದಿನಗಳವರೆಗೆ 1 ಜಿಬಿ ಡಾಟಾ ಪಡೆಯಬಹುದಾಗಿದೆ.
ಇನ್ನು 2ಜಿಬಿ ಪ್ಲಾನ್ ನತ್ತ ಗಮನ ಹರಿಸುವುದಾದರೆ ಜಿಯೋ ಪ್ರೈಮ್ ಸದಸ್ಯ ಗ್ರಾಹಕರು 509 ರುಗಳನ್ನು ಪಾವತಿ ಮಾಡಿದರೆ, 84 ದಿನಗಳ ವರೆಗೆ ನಿತ್ಯ 2 ಜಿಬಿ ಡಾಟಾ ಹಾಗೂ ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ. ಇನ್ನು ಪ್ರೈಮ್ ಸದಸ್ಯರಲ್ಲದ ಗ್ರಾಹಕರಾಗಿದ್ದರೆ ಇದೇ ಆಫರ್ ಅನ್ನು 549 ರುಗಳನ್ನು ನೀಡಿ ಖರೀದಿಸಬೇಕಿದೆ. ಹೊಸ ಗ್ರಾಹಕರು ಈ ಆಪರ್ ಗಾಗಿ 608 ರುಗಳನ್ನು ನೀಡಿ ಖರಿದಿಸಬಹುದಾಗಿದೆ.