ವಾಣಿಜ್ಯ

ನೋಟು ನಿಷೇಧದ ನಂತರ 60 ಸಾವಿರ ಸಂಸ್ಥೆಗಳಿಗೆ ತೆರಿಗೆ ಇಲಾಖೆ ನೊಟೀಸು

Sumana Upadhyaya
ನವದೆಹಲಿ: ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆ ನಂತರ ಕಪ್ಪು ಹಣ ಪತ್ತೆಗಾಗಿ ಎರಡನೇ ಹಂತದ ಆಪರೇಶನ್ ಕ್ಲೀನ್ ಮನಿಯನ್ನು ಆರಂಭಿಸಲಾಗಿದ್ದು, ಆದಾಯ ತೆರಿಗೆ ಇಲಾಖೆ 60,000ಕ್ಕೂ ಅಧಿಕ ಸಂಸ್ಥೆಗಳನ್ನು ತನಿಖೆ ನಡೆಸಲಿದೆ.
ತೆರಿಗೆ ಇಲಾಖೆಯ ನೀತಿ ತಯಾರಿಕಾ ಅಂಗವಾದ ಕೇಂದ್ರ ನೇರ ತೆರಿಗೆಗಳ ಮಂಡಳಿ, ನವೆಂಬರ್ 9 2016ರಿಂದ ಫೆಬ್ರವರಿ 28ರ ಮಧ್ಯೆ 9,334 ಕೋಟಿ ರೂಪಾಯಿ ಅಘೋಷಿತ ಆದಾಯವ ನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದೆ.
ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಹಳೆಯ 500 ಮತ್ತು 1000ದ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದರು.
ನೋಟುಗಳ ಅಮಾನ್ಯತೆ ಸಮಯದಲ್ಲಿ ಅಧಿಕ ನೋಟುಗಳ ಮಾರಾಟ ಮಾಡಿದ 60,000ಕ್ಕೂ ಅಧಿಕ ಮಂದಿಯನ್ನು ತನಿಖೆಗೊಳಪಡಿಸಲು ಗುರುತಿಸಲಾಗಿದೆ. ಅಧಿಕ ಮೌಲ್ಯದ ಆಸ್ತಿಗಳ ಖರೀದಿಯು 6,000ಕ್ಕೂ ಹೆಚ್ಚು ವಹಿವಾಟು ನಡೆದಿದೆ ಮತ್ತು ಬಾಹ್ಯ ಪಾವತಿಯ 6,600 ಕೇಸುಗಳನ್ನು ವಿಸ್ತಾರವಾಗಿ ತನಿಖೆ ನಡೆಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ತೆರಿಗೆ ಇಲಾಖೆಗೆ ಯಾವುದೇ ಪ್ರತಿಕ್ರಿಯೆ ನೀಡದ ಕೇಸುಗಳನ್ನು ಸಹ ತನಿಖೆ ನಡೆಸಲಾಗುವುದು ಎಂದು ಸಿಬಿಡಿಟಿ ತಿಳಿಸಿದೆ.
ಜನವರಿ 31ರಂದು ಆಪರೇಶನ್ ಕ್ಲೀನ್ ಮನಿಯ ಮೊದಲ ಹಂತ ಆರಂಭವಾಗಿದ್ದು ಸುಮಾರು 17 ಲಕ್ಷ ಜನರಿಗೆ ತೆರಿಗೆ ಇಲಾಖೆ ಆನ್ ಲೈನ್ ಮೂಲಕ ಪ್ರಶ್ನೆಗಳನ್ನು ಕಳುಹಿಸಿತ್ತು. ಅವರಲ್ಲಿ 9 ಲಕ್ಷ ಜನರು ಇಲಾಖೆಗೆ ಉತ್ತರ ನೀಡಿದ್ದರು.
SCROLL FOR NEXT