ನವದೆಹಲಿ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ ಎಂಬ ಗಾದೆ ಮಾತಿನಂತೆ ಸ್ನ್ಯಾಪ್ ಚಾಟ್ ಮಾಡಿದ ಯಡವಟ್ಟಿಗೆ ನೆಟಿಜೆನ್ ಗಳು ಸ್ನ್ಯಾಪ್ ಡೀಲ್ ಗೆ ಶಿಕ್ಷೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು..ಭಾರತವೊಂದು ಬಡ ದೇಶ, ಅಲ್ಲಿ ಸಾಮ್ರಾಜ್ಯ ವಿಸ್ತರಿಸಲು ನನಗೆ ಇಷ್ಟವಿಲ್ಲ ಎಂದು ಸ್ನ್ಯಾಪ್ ಚ್ಯಾಟ್ ಆಪ್ ನ ಸಿಇಒ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಲು ಹೋಗಿ ಜನರು ಎಡವಟ್ಟು ಮಾಡಿಕೊಂಡಿದ್ದು, ಸ್ನಾಪ್ ಚಾಟ್ ಬಹಿಷ್ಕರಿಸಲು ಹೋಗಿ ಖ್ಯಾತ ಅಂತರ್ಜಾಲ ತಾಣ ಸ್ನ್ಯಾಪ್ ಡೀಲ್ ಗೆ ಬಹಿಷ್ಕಾರ ಹಾಕಿದ್ದಾರೆ. ಸ್ನಾಪ್ ಚಾಟ್ ಸಿಇಒ ಇವಾನ್ ಸ್ಪೀಗೆಲ್ ಭಾರತದ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಸುದ್ದಿಯಾದ ಬೆನ್ನಲ್ಲೇ ಸ್ನ್ಯಾಪ್ ಚಾಟ್ ಬಹಿಷ್ಕರಿಸಿ ಎಂಬ ಕ್ಯಾಂಪೇನ್ ಭಾರತದಲ್ಲಿ ಆರಂಭವಾಗಿತ್ತು. ಹೀಗೆ ಅ್ಯಪ್ ಅನ್ನು ಬಹಿಷ್ಕಾರ ಮಾಡುವ ಭರದಲ್ಲಿ ಕೆಲವರು ಸ್ನ್ಯಾಪ್ ಡೀಲ್ ಆನ್ ಲೈನ್ ಮಾರಾಟ ಸಂಸ್ಥೆಯನ್ನು ಬಹಿಷ್ಕರಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.
ಜನರ ಯಡನಟ್ಟಿನಿಂದಾಗಿ ನಷ್ಟವಾಗುತ್ತಿರುವುದು ಮಾತ್ರ ಸ್ನ್ಯಾಪ್ ಡೀಲ್ ಸಂಸ್ಥೆಗೆ. ಈಗಾಗಲೇ ಲಕ್ಷಾಂತರ ಮಂದಿ ಸ್ನಾಪ್ ಡೀಲ್ ಆ್ಯಪ್ ಅನ್ನು ಅನ್ ಇನ್ಸ್ಟಾಲ್ ಮಾಡುತ್ತಿದ್ದು, ಸಂಸ್ಥೆಗೆ ದೊಡ್ಡ ತಲೆನೋವು ತಂದೊಡ್ಡಿದೆ. ಈ ಹಿಂದೆ ಅಸಹಿಷ್ಣುತೆ ಕುರಿತಂತೆ ಸ್ನಾಪ್ ಡೀಲ್ ಸಂಸ್ಥೆಯ ರಾಯಭಾರಿಯಾಗಿದ್ದ ಅಮೀರ್ ಖಾನ್ ಹೇಳಿಕೆ ನೀಡಿದ್ದಾಗಲೂ ಸ್ನಾಪ್ ಡೀಲ್ ಸಂಸ್ಥೆ ಭಾರಿ ವಿರೋಧ ಎದುರಿಸಿತ್ತು. ಇದಗೀ ಮತ್ತೆ ತನ್ನದಲ್ಲದ ತಪ್ಪಿಗೆ ಸ್ನಾಪ್ ಡೀಲ್ ಸಂಸ್ಥೆ ಶಿಕ್ಷೆ ಎದುರಿಸುವಂತಾಗಿದೆ.