ವಾಣಿಜ್ಯ

ಗ್ರಾಹಕರ ಮನೆಗೇ ಪೆಟ್ರೋಲ್, ಡೀಸೆಲ್ ತಲುಪಿಸಲು ಸರ್ಕಾರ ಚಿಂತನೆ

Lingaraj Badiger
ನವದೆಹಲಿ: ಪೆಂಟ್ರೋಲ್ ಬಂಕ್ ಗಳ ಮುಂದೆ ಕ್ಯೂ ನಿಲ್ಲುವುದನ್ನು ತಪ್ಪಿಸುವುದಕ್ಕಾಗಿ ಗ್ರಾಹಕರು ಮುಂಗಡವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಬುಕ್ ಮಾಡಿದರೆ ಅವರ ಮನೆಗೆ ತಲುಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತೈಲ ಸಚಿವಾಲಯ ಶುಕ್ರವಾರ ಟ್ವೀಟ್ ಮಾಡಿದೆ.
ಪ್ರತಿ ನಿತ್ಯ ಸುಮಾರ 350 ಮಿಲಿಯನ್ ಜನ ಪೆಟ್ರೋಲ್ ಡೀಸೆಲ್ ಗಾಗಿ ಬಂಕ್ ಗೆ ಬರುತ್ತಾರೆ ಮತ್ತು ಬಂಕ್ ಗಳಲ್ಲಿ ಪ್ರತಿ ವರ್ಷ 25 ಬಿಲಿಯನ್ ರುಪಾಯಿ ವಹಿವಾಟು ನಡೆಸುತ್ತವೆ.
ಭಾರತ ಪೆಟ್ರೋಲ್, ಡೀಸೆಲ್ ಬಳಕೆಯಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ದೇಶವಾಗಿದ್ದು, ಮೇ 1ರಿಂದ ದೇಶದ ಐದು ನಗರಗಳಲ್ಲಿ ನಿತ್ಯ ತೈಲ ದರ ಪರಿಷ್ಕರಿಸಲಾಗುತ್ತಿದೆ. ಬಳಿಕ ದೇಶಾದ್ಯಂತ ಜಾರಿಯಾಗುವ ಸಾಧ್ಯತೆ ಇದೆ.
SCROLL FOR NEXT