ಸಾಂದರ್ಭಿಕ ಚಿತ್ರ 
ವಾಣಿಜ್ಯ

ಕರ್ನಾಟಕ: 5 ಹೊಸ ಮಾರ್ಗಗಳಲ್ಲಿ ಸ್ಥಳೀಯ ವಿಮಾನ ಸೇವೆಗಳ ಆರಂಭ ಸದ್ಯದಲ್ಲೆ

ಮೈಸೂರು-ಚೆನ್ನೈ, ಬೆಂಗಳೂರು-ಸೇಲಂ ಮತ್ತು ಇತರ ಸಣ್ಣ ಪಟ್ಟಣಗಳಿಗೆ ವಾಯು ಸಂಚಾರ ಸಂಪರ್ಕವು...

ಬೆಂಗಳೂರು: ಮೈಸೂರು-ಚೆನ್ನೈ, ಬೆಂಗಳೂರು-ಸೇಲಂ ಮತ್ತು ಇತರ ಸಣ್ಣ ಪಟ್ಟಣಗಳಿಗೆ ವಾಯು ಸಂಚಾರ ಸಂಪರ್ಕವು ನಿಜವಾಗುವ ಸಾಧ್ಯತೆ ದೂರದಲ್ಲಿಲ್ಲ. ಸ್ಥಳೀಯ ಸಂಪರ್ಕ ಸೇವೆ(ಆರ್ ಸಿಎಸ್)ನ ಭಾಗವಾಗಿ  ಕೆಲವು ವಿಮಾನಯಾನ ಸಂಸ್ಥೆಗಳು ಈ ಎರಡು ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ಮುಂದೆ ಬಂದಿದ್ದು ಮುಂದಿನ ಕೆಲ ವಾರಗಳಲ್ಲಿ ಸೇವೆ ಆರಂಭವಾಗುವ ನಿರೀಕ್ಷೆಯಿದೆ.
ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧಿಕೃತ ಮೂಲಗಳು ಹೇಳುವ ಪ್ರಕಾರ, ಆರ್ ಸಿಎಸ್ ಪ್ರಾರಂಭದ ಭಾಗವಾಗಿ ರಾಜ್ಯ ಸರ್ಕಾರ ಆರ್ ಸಿಎಸ್ ಮಾರ್ಗಗಳಲ್ಲಿ ಸಂಚರಿಸುವ ವಿಮಾನಯಾನ ಕಾರ್ಯ ನಿರ್ವಹಣೆಗೆ ರಿಯಾಯಿತಿ ನೀಡಲಿದೆ. ವಿದ್ಯುತ್, ನೀರು ಮತ್ತು ಇತರ ಮೂಲಭೂತ ಉಪಯೋಗ ಸೇವೆಗಳಲ್ಲಿ ರಿಯಾಯಿತಿ ನೀಡಲಿದೆ.
ಆರ್ ಸಿಎಸ್ ವಿಮಾನ ನಿಲ್ದಾಣಗಳಿಗೆ ಮೆಟ್ರೋ ಅಥವಾ ಬೇರೆ ರೈಲು ಸಂಪರ್ಕ ಸೇವೆಯನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಭದ್ರತೆ ಮತ್ತು ಅಗ್ನಿಶಾಮಕ ಸೇವೆಯನ್ನು ಸರ್ಕಾರ ನಡೆಸುವ ಆರ್ ಸಿಎಸ್ ವಿಮಾನ ನಿಲ್ದಾಣಗಳಿಗೆ ಉಚಿತ ದರದಲ್ಲಿ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. 
ಕರ್ನಾಟಕದ ವಿವಿಧ ನಗರಗಳು ಮತ್ತು ಪಟ್ಟಣಗಳಿಗೆ ವಾಯು ಸಂಚಾರ ಸಂಪರ್ಕ ಒದಗಿಸಲು 5 ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿವೆ. ಕರ್ನಾಟದಲ್ಲಿ 5 ಮಾರ್ಗಗಳನ್ನು ಅಂತಿಮಗೊಳಿಸಲಾಗಿದ್ದು ಅವುಗಳಲ್ಲಿ ಎರಡರಿಂದ ಮೂರು ಮಾರ್ಗಗಳು ಮುಂದಿನ ಕೆಲ ವಾರಗಳಲ್ಲಿ ಕಾರ್ಯನಿರ್ವಹಿಸಲು ಆರಂಭಿಸಲಿದೆ ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ವಿಮಾನ ಸಂಚಾರ ಸದ್ಯದಲ್ಲಿಯೇ ಆರಂಭವಾಗಲಿದೆ. ಬೆಂಗಳೂರು-ಸೇಲಂ ಮತ್ತು ಮೈಸೂರು-ಚೆನ್ನೈ ಆಗಿವೆ. ಬೆಂಗಳೂರು-ಬೀದರ್ ಮಧ್ಯೆ ಕೂಡ ವಿಮಾನ ಸಂಚಾರ ಆರಂಭವಾಗಲಿದೆ.
ಬೆಂಗಳೂರು-ವಿದ್ಯಾನಗರ(ಬಳ್ಳಾರಿ) ಮಾರ್ಗ ಮತ್ತು ಇತರ ಕೆಲ ಮಾರ್ಗಗಳನ್ನು ತಪಾಸಣೆ ಮಾಡಲಾಗುತ್ತಿದೆ. ಇದು ಖಾಸಗಿ ಸಂಸ್ಥೆಯ ಒಡೆತನದಲ್ಲಿರುವುದರಿಂದ ಕೆಲವು ಭದ್ರತಾ ವಿಷಯಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಇದಕ್ಕೆ ಕೆಲ ಸಮಯ ಹಿಡಿಯಬಹುದು. ಈ ಮಾರ್ಗದಲ್ಲಿ ಟ್ರು ಜೆಟ್ ಏರ್ ವೇಸ್ ಕಾರ್ಯನಿರ್ವಹಿಸಲಿದೆ.
ಪ್ರಧಾನ ಮಂತ್ರಿ ಉಡಾನ್ ಯೋಜನೆಗೆ ಶಿಮ್ಲಾದಲ್ಲಿ ನಾಳೆ ಚಾಲನೆ ನೀಡಲಿದ್ದಾರೆ. ಇದರಡಿಯಲ್ಲಿ 5 ವಿಮಾನಗಳು ಸದ್ಯಕ್ಕೆ 128 ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿವೆ. ಇವು 70 ವಿಮಾನ ನಿಲ್ದಾಣಗಳನ್ನು ಸಂಪರ್ಕಿಸಲಿವೆ. ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉಡಾನ್ ವಿಮಾನಗಳು ಸಂಪರ್ಕಿಸಲಿವೆ. ಕರ್ನಾಟಕ, ತಮಿಳುನಾಡು, ಪುದುಚೆರಿ, ಆಂಧ್ರ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳು ಆಗಿವೆ.
ಇತ್ತೀಚೆಗೆ ಕೇಂದ್ರ ನಾಗರಿಕ ವಿಮಾನಯಾನ ಮತ್ತು ಕರ್ನಾಟಕ ಸರ್ಕಾರ ನಿಲುವಳಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರಂತೆ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ 19 ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಮತ್ತು ಉನ್ನತ ದರ್ಜೆಗೇರಿಸಲು ಗುರುತು ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT